ತ್ರಿಶೂರ್: ತ್ರಿಶೂರ್ ವೇಲಪ್ಪಯ್ಯ ಎಂಬಲ್ಲಿ ರೈಲಿನಿಂದ ತಳ್ಳಿದ ಪರಿಣಾಮ ಟಿಟಿಇ ಮೃತಪಟ್ಟಿದ್ದಾರೆ. ಎರ್ನಾಕುಳಂ ಮೂಲದ ಕೆ ವಿನೋದ್ ಕೊಲೆಯಾದವರು.
ಪ್ರಯಾಣಿಕ, ಅನ್ಯರಾಜ್ಯ ಕಾರ್ಮಿಕ ರಜನಿಕಾಂತ್ ಟಿಕೆಟ್ ಕೇಳಿದ್ದಕ್ಕಾಗಿ ಕೋಪದಿಂದ ಟಿಟಿಇಯನ್ನು ರೈಲಿನಿಂದ ತಳ್ಳಿದನು.
ಆರೋಪಿ ಕಂಠಪೂರ್ತಿ ಕುಡಿದಿದ್ದ ಎನ್ನಲಾಗಿದೆ. ಒಡಿಶಾ ಮೂಲದ ರಜನಿಕಾಂತ್ ನನ್ನು ಪಾಲಕ್ಕಾಡ್ ರೈಲ್ವೆ ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿನೋದ್ ಮೃತದೇಹ ತ್ರಿಶೂರ್ ಸರ್ಕಾರಿ. ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.