ಮಧೂರು: ಕುಂಬಳೆ ಸೀಮೆಯ ಅತಿ ಪುರಾತನ ಹಾಗು ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಶನಿವಾರ (ಏ.13) ಬೆಳಗ್ಗೆ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು.
ಬೆಳಗ್ಗೆ ವೇದ ಪಾರಾಯಣ, ಧ್ವಜಾರೋಹಣ, ಸಹಸ್ರ ಕುಂಭಾಭಿಷೇಕ, ತುಲಾಭಾರ ಸೇವೆ, ಸಂಜೆ ತಾಯಂಬಕ, ದೀಪಾರಾಧನೆ, ರಾತ್ರಿ ಉತ್ಸವ ಬಲಿ ನಡೆಯಿತು. ಇಂದು(ಏ.14) ಬೆಳಗ್ಗೆ 5 ಕ್ಕೆ ದೀಪೋತ್ಸವ, ವಿಷು ಕಣಿಯ ವಿಶೇಷ ಬಲಿ, ರಾಜಾಂಗಣ ಪ್ರಸಾದ, 7.30 ಕ್ಕೆ ಪಂಚವಾದ್ಯ, ತುಲಾಭಾರ ಸೇವೆ, ರಾತ್ರಿ 8 ಕ್ಕೆ ಉತ್ಸವ ಬಲಿ ನಡೆಯುವುದು. ಏ.15 ರಂದು ಬೆಳಗ್ಗೆ 5 ಕ್ಕೆ ದೀಪೋತ್ಸವ, ತುಲಾಭಾರ ಸೇವೆ, ರಾತ್ರಿ 8 ಕ್ಕೆ ನಡುದೀಪೋತ್ಸವ, ಉತ್ಸವ ಬಲಿ, ಸೇವೆ ಸುತ್ತುಗಳು ನಡೆಯುವುದು.
ಏ.16 ರಂದು ಬೆಳಗ್ಗೆ 5 ಕ್ಕೆ ಉತ್ಸವ ಬಲಿ, ದೀಪೋತ್ಸವ, ದರ್ಶನ ಬಲಿ, ಸಂಜೆ 5 ಕ್ಕೆ ತಾಯಂಬಕ, ದೀಪಾರಾಧನೆ, 7 ಕ್ಕೆ ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಬಲಿ ಶೋಭಾಯಾತ್ರೆ, ತಾಲೀಮು ಪ್ರದರ್ಶನ, ರಾತ್ರಿ 8.30 ಕ್ಕೆ ಮೂಲ ಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆ ಪೂಜೆ, 10 ಕ್ಕೆ ಮಧೂರು ಬೆಡಿಕಟ್ಟೆಯಲ್ಲಿ ಸಾಂಪ್ರದಾಯಿಕ ಸುಡುಮದ್ದು ಪ್ರದರ್ಶನ ನಡೆಯುವುದು. ಏ.17 ರಂದು ಬೆಳಗ್ಗೆ 7 ಕ್ಕೆ ಕವಾಟೋದ್ಘಾಟನೆ, ಮಧ್ಯಾಹ್ನ 12 ಕ್ಕೆ ತುಲಾಭಾರ ಸೇವೆ, ಸಂಜೆ 5 ಕ್ಕೆ ತಾಯಂಬಕ, ದೀಪಾರಾಧನೆ, ರಾತ್ರಿ 10 ಕ್ಕೆ ವಿಶೇಷ ವಿದ್ಯುದ್ದೀಪಾಲಂಕೃತ ಕ್ಷೇತ್ರದ ಕೆರೆಯಲ್ಲಿ ಶ್ರೀ ದೇವರ
ಅವಭೃತ ಸ್ನಾನ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯುವುದು.