ಕಾಸರಗೋಡು: ನಾಗರಕಟ್ಟೆ ಶ್ರೀ ಕೊರತಿಯಮ್ಮ ಗುಳಿಗಜ್ಜ ದೈವಸ್ಥಾನದ 10 ನೇ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಏ.23 ರಂದು ಆರಂಭಗೊಂಡಿದ್ದು, ಏ.25 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
23 ರಂದು ಬೆಳಗ್ಗೆ 8 ಕ್ಕೆ ಗಣಪತಿ ಹೋಮ, 9 ಕ್ಕೆ ಹುಲ್ಪೆ ಮೆರವಣಿಗೆ, 10 ಕ್ಕೆ ಶ್ರೀ ಕೊರತಿಯಮ್ಮನಿಗೆ ಬೆಳ್ಳಿಯ ಕತ್ತಿ ಸಮರ್ಪಣೆ, 11 ಕ್ಕೆ ಶ್ರೀ ಕೊರತಿಯಮ್ಮನ ತಂಬಿಲ, ಶ್ರೀ ಗುಳಿಗಜ್ಜನ ತಂಬಿಲ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ 4 ರಿಂದ ಧಾರ್ಮಿಕ ಸಭೆ ನಡೆಯಿತು. ಏ.24 ರಂದು ಬೆಳಗ್ಗೆ 11 ಕ್ಕೆ ಶ್ರೀ ಗುಳಿಗ ದೈವದ ಕೋಲ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ರಾತ್ರಿ 7 ರಿಂದ ಶ್ರೀ ಕೊರತಿ ದೈವದ ಕೋಲ, 9 ಕ್ಕೆ ಅನ್ನಸಂತರ್ಪಣೆ ಜರಗಲಿದೆ.
ಏ.25 ರಂದು ಬೆಳಗ್ಗೆ 11 ರಿಂದ ಶ್ರೀ ಗುಳಿಗ ದೈವದ ಕೋಲ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ರಾತ್ರಿ 7 ಕ್ಕೆ ಶ್ರೀ ಕೊರತಿ ದೈವದ ಕೋಲ, ರಾತ್ರಿ 9 ಕ್ಕೆ ಅನ್ನಸಂತರ್ಪಣೆ ನಡೆಯುವುದು.