ಕೊಚ್ಚಿ: ಪೂಕೋಡ್ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿಯನ್ನು ಅಮಾನತುಗೊಳಿಸಿದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿ ಜೆ.ಎಸ್. ಸಿದ್ಧಾರ್ಥ್ ಕೊಲೆ ಘಟನೆಯ ನಂತರ ಉಪಕುಲಪತಿ ಡಾ. ಎಂ.ಆರ್. ಶಶೀಂದ್ರನಾಥ್ ಅವರನ್ನು ಕುಲಪತಿಯೂ ಆಗಿರುವ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅಮಾನತುಗೊಳಿಸಿದ್ದರು.
ವಿಸಿಯನ್ನು ಅಮಾನತು ಮಾಡಲು ರಾಜ್ಯಪಾಲರ ಅಧಿಕಾರ ವ್ಯಾಪ್ತಿ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಾಲಯ, ವಿವರವಾದ ವಾದ-ವಿವಾದಗಳ ನಂತರ ತೀರ್ಪು ಪ್ರಕಟಿಸಿತು. ರಾಜ್ಯಪಾಲರ ಅಮಾನತು ಆದೇಶವನ್ನು ಕಾನೂನಾತ್ಮಕವಾಗಿ ಪ್ರಶ್ನಿಸುವುದಿಲ್ಲ ಎಂದು ಶಶೀಂದ್ರನಾಥ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ ಸರ್ಕಾರದ ಒತ್ತಡಕ್ಕೆ ಮಣಿದು ರಾಜ್ಯಪಾಲರ ಕ್ರಮ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ಬಳಿಕ ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಡಾ. ಕೆ.ಎಸ್. ಅನಿಲ್‍ಗೆ ಇದೀಗ ರಾಜ್ಯಪಾಲರು ಉಪಕುಲಪತಿ ಹುದ್ದೆಯನ್ನು ನೀಡಿದ್ದಾರೆ.