ತಿರುವನಂತಪುರಂ; ಅರುಣಾಚಲ ಪ್ರದೇಶದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ನವೀನ್ ಥಾಮಸ್ ಮತ್ತು ಅವರ ಪತ್ನಿ ದೇವಿ ಅವರ ಮನೆಯಲ್ಲಿ ಪತ್ತೆಯಾದ ಲ್ಯಾಪ್‍ಟಾಪ್‍ನಲ್ಲಿ ಅನ್ಯಗ್ರಹ ಜೀವಿಗಳ ಹುಡುಕಾಟ ಬಗ್ಗೆ ಮಾಹಿತಿ ಇರುವುದು ಪತ್ತೆಯಾಗಿದೆ.
500 ಮತ್ತು 1000 ಪುಟಗಳ ಪುಸ್ತಕಗಳು ಲ್ಯಾಪ್‍ಟಾಪ್‍ನಲ್ಲಿ ಡೌನ್‍ಲೋಡ್ ಮಾಡಲಾಗಿದ್ದು, ಸಾವಿನ ನಂತರ ಬರಬೇಕಾದ ಭೂಮ್ಯತೀತ ಜೀವಿಗಳಲ್ಲಿನ ಜೀವನದ ಬಗ್ಗೆ ಪ್ರಶ್ನೆಗಳು ಮತ್ತು ಉತ್ತರಗಳು ಅದಲ್ಲಿದೆ.
ನವೀನ್ ಮತ್ತು ಅವರ ಪತ್ನಿ ದೇವಿ ಕೆಲವು ಅಲೌಕಿಕ ವಿಷಯಗಳ ಹುಚ್ಚು ಚಿಂತನೆಯಲ್ಲಿದ್ದರು ಎಂದು ತಂದೆ ಹೇಳಿದ್ದಾರೆ ಎಂದು ಅರುಣಾಚಲದ ಲೋವರ್ ಸುಬನ್ಸಿರಿ ಎಸ್ಪಿ ಕೆನ್ನಿ ಬಾಗ್ರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ದೇವಿ ಮತ್ತು ಆರ್ಯ ಅವರ ಕೈ ಮತ್ತು ಕುತ್ತಿಗೆಯ ಮೇಲೆ ಆಳವಾದ ಗಾಯಗಳಾಗಿವೆ. ಆದರೆ ನವೀನ್ ಅವರ ಮಣಿಕಟ್ಟಿನ ಗಾಯ ಅಷ್ಟು ಆಳವಾಗಿಲ್ಲ.ಯಾವುದೇ ವ್ಯಕ್ತಿಗಳು ಅಥವಾ ಸಾಮಾಜಿಕ ಮಾಧ್ಯಮ ಗುಂಪುಗಳ ಪ್ರಭಾವವಿದೆಯೇ ಎಂಬ ಬಗ್ಗೆಯೂ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಮನೋವೈದ್ಯರ ಸಹಾಯವನ್ನೂ ಪಡೆಯಲಾಗುತ್ತಿದೆ
ಮೂವರು ರಕ್ತ ಹೆಪ್ಪುಗಟ್ಟುವ ಔಷಧಿ ಸೇವಿಸಿರುವ ಶಂಕೆ ಇದೆ ಎಂದು ಅರುಣಾಚಲ ಪೆÇಲೀಸರು ತಿಳಿಸಿದ್ದಾರೆ. ಅವರು ಸತ್ತಿದ್ದ ಹೋಟೆಲ್ ಕೊಠಡಿಯಲ್ಲಿ ಇಂತಹ ಔಷಧ ಪತ್ತೆಯಾಗಿದೆ. ಆರ್ಯಾ ತಮ್ಮ ಮಗಳು ಎಂದು ಹೇಳಿ ಕೊಠಡಿ ತೆಗೆದುಕೊಂಡರು. ಕೋಣೆಯಲ್ಲಿ ಕೈ ಮಿಸಲಾಯಿಸಿದ ಯಾವುದೇ ಚಿಹ್ನೆಗಳು ಇರಲಿಲ್ಲ. ಬೆಡ್ ಶೀಟ್ ಕೂಡ ಬದಲಾಯಿಸಿಲ್ಲ. ಬಟ್ಟೆಯನ್ನು ಬಾಗಿಲಿನ ಕೆಳಗೆ ಇಟ್ಟು ಮುಚ್ಚಲಾಗಿದೆ ಎಂದೂ ಎಸ್ಪಿ ಹೇಳಿದ್ದಾರೆ. ಬೆಡ್ ಮೇಲೆ ಗಾಯ ಮಾಡಲು ಬಳಸಿದ್ದ ಬ್ಲೇಡ್ ಪತ್ತೆಯಾಗಿದೆ. ್ಲ ಸ್ವಲ್ಪ ಕೂದಲನ್ನು ಕತ್ತರಿಸಿಟ್ಟಿರುವುದು ತಟ್ಟೆಯಲ್ಲಿ ಪತ್ತೆಯಾಗಿದೆ.
ಮೂವರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಮೃತದೇಹಗಳನ್ನು ಆಂಬ್ಯುಲೆನ್ಸ್‍ನಲ್ಲಿ ಗುವಾಹಟಿಗೆ ತರಲಾಗಿದ್ದು, ಇಂದು ಕೋಲ್ಕತ್ತಾ ಮೂಲಕ ತಿರುವನಂತಪುರಕ್ಕೆ ತರಲಾಗುವುದು.