ಕಾಸರಗೋಡು : ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರಗಳ ಸೂಕ್ಷ್ಮ ಪರಿಶೀಲನೆ ಪೂರ್ಣಗೊಂಡಿದ್ದು, ಒಟ್ಟು 13 ನಾಮಪತ್ರಗಳನ್ನು ಪರಿಶೀಲಿಸಲಾಯಿತು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಇನ್ಬಾಶೇಖರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು.
ಇಬ್ಬರು ಸ್ವತಂತ್ರ ಅಭ್ಯರ್ಥಿಗಳ ನಾಮಪತ್ರ ತಿರಸ್ಕøತಗೊಂಡಿದೆ. ಬಾಲಕೃಷ್ಣನ್ ಚೇಮಂಚೇರಿ (ಸ್ವತಂತ್ರ) ಮತ್ತು ವಿ.ರಾಜೇಂದ್ರನ್ (ಸ್ವತಂತ್ರ) ಅವರ ನಾಮಪತ್ರಗಳನ್ನು ಸಾಕಷ್ಟು ದಾಖಲೆ ಸಮರ್ಪಿಸದ ಹಿನ್ನೆಲೆಯಲ್ಲಿ ತಿರಸ್ಕøತಗೊಳಿಸಲಾಗಿದೆ. ಸಿ.ಎಚ್.ಕುಞಂಬು (ಸಿಪಿಐಎಂ) ಮತ್ತು ಎ.ವೇಲಾಯುಧನ್ (ಬಿಜೆಪಿ) ಅವರ ನಾಮಪತ್ರಗಳನ್ನು ಪರಿಶೀಲಿಸಲಾಗಿದ್ದು, ಅಧಿಕೃತ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾದ ಕಾರಣ ಈ ಸರಡು ನಾಮಪತ್ರಗಳು ತಿರಸ್ಕೃತಗೊಂಡಿವೆ.
ಎಂಎಲ್ ಅಶ್ವಿನಿ (ಭಾರತೀಯ ಜನತಾ ಪಕ್ಷ), ಎಂವಿ ಬಾಲಕೃಷ್ಣನ್ ಮಾಸ್ಟರ್ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾಕ್ರ್ಸ್‍ವಾದಿ), ರಾಜ್ ಮೋಹನ್ ಉಣ್ಣಿತ್ತಾನ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಸುಕುಮಾರಿ ಎಂ (ಬಹುಜನ ಸಮಾಜ ಪಕ್ಷ), ಅನೀಶ್ ಪಯ್ಯನ್ನೂರ್ (ಸ್ವತಂತ್ರ), ಎನ್ ಕೇಶವ ನಾಯಕ್ (ಸ್ವತಂತ್ರ), ಬಾಲಕೃಷ್ಣನ್ ಎನ್ (ಸ್ವತಂತ್ರ), ಮನೋಹರನ್ ಕೆ (ಸ್ವತಂತ್ರ) ಮತ್ತು ರಾಜೇಶ್ವರಿ ಕೆಆರ್ (ಸ್ವತಂತ್ರ) ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು. ಏಪ್ರಿಲ್ 8ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.