ಕಣ್ಣೂರು: ಇಲಿ, ಹಾವು, ಪೇಪರ್ ಬಾಂಬ್... ಇದ್ಯಾವುದಕ್ಕೂ ಹೆದರದ ರೈಲು ಪ್ರಯಾಣಿಕರು ಎ.ಸಿ. ಕೋಚ್ ಒಳಗೆ ಬೆವರಿ ಬೆಪ್ಪಾದ ಘಟನೆ ನಡೆದಿದೆ.
ಮಾಲೀಕರಿಲ್ಲದ ಚೀಲದಲ್ಲಿದ್ದ 'ಹೆಚ್ಚುವರಿ' ವಸ್ತುವೇ ಅವರನ್ನು ಹೆದರಿಸಿತ್ತು. ಕೊಯಮತ್ತೂರು-ಹಿಸಾರ್ ಎಕ್ಸ್ ಪ್ರೆಸ್ ನಲ್ಲಿ ಈ ಘಟನೆ ನಡೆದಿದೆ. ಕೊಯಮತ್ತೂರಿನಿಂದ ಹೊರಟಿದ್ದ ರೈಲಿನ ಕೋಚ್‍ನಲ್ಲಿ ಗಂಟೆಗಟ್ಟಲೆ ಗಮನಿಸದೆ ಇಟ್ಟಿದ್ದ ಮಾಲಿಕರಿಲ್ಲದ ಬ್ಯಾಗ್ ತೆರೆದು ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಅದರಲ್ಲಿ ಎರಡು ತೆಂಗಿನಕಾಯಿ, ಕುಂಕುಮ, ಒಂದು ವಿಗ್ರಹ ಮತ್ತು ಎರಡು ಮದ್ಯದ ಬಾಟಲಿಗಳು ಇದ್ದವು. 'ಹೆಚ್ಚುವರಿ' ವಿಷಯದ ಮಾತು ಇತರ ಕೋಚ್‍ಗಳಿಗೆ ಹರಡಿತು. ರೈಲು ಪಾಲಕ್ಕಾಡ್ ತಲುಪಿದಾಗ ಪ್ರಯಾಣಿಕರು ಬ್ಯಾಗ್ ಗೆ ಗತಿ ಕಾಣಿಸುವಂತೆ ಒತ್ತಾಯಿಸಿದರು.
ಅನೇಕ ಜನರು ದೂರು ದಾಖಲಿಸಿದಾಗ ರೈಲ್ವೆ ಅಧಿಕಾರಿಗಳು ಕೊನೆಗೂ ಎಚ್ಚೆತ್ತರು. ಆದರೆ ವಾರಿಸುದಾರರಿಲ್ಲದ ಬ್ಯಾಗ್ ತೆರೆದು ಪರಿಶೀಲಿಸಲು ಪೋಲೀಸರೂ ಹೆದರಿದರು. ಕೊನೆಗೆ ಬ್ಯಾಗ್ ಮತ್ತು ಸಾಮಾನುಗಳನ್ನು ಶೋರ್ನೂರಿನಲ್ಲಿ ಬೀಳಿಸಲಾಯಿತು. ಆ ನಂತರವೇ ಪ್ರಯಾಣಿಕರು ಉಸಿರು ಬಿಟ್ಟು ನಿರಾಳರಾದರು. ಬ್ಯಾಗ್ ಮತ್ತು ಸಾಮಗ್ರಿಗಳನ್ನು ನದಿಗೆ ಎಸೆದಿರುವುದಾಗಿ ಪೋಲೀಸರು ಸೂಚನೆ ನೀಡಿದರು.