ಉಪ್ಪಳ: “ನೀವು ಓದಿ, ನಿಮ್ಮ ಮನೆಯವರೂ ಓದಲಿ” ಎಂಬ ಆಶಯದೊಂದಿಗೆ ಆಯೋಜಿಸಿದ ಮಧುರ ಮಲಯಾಳಂ ಪುಸ್ತಕ ವಿತರಣಾ ಕಾರ್ಯಕ್ರಮ ಜೆ.ಎಲ್.ಪಿ ಶಾಲೆ ಮುಳಿಂಜದಲ್ಲಿ ಜರಗಿತು.
ಸಮಗ್ರ ಶಿಕ್ಷಾ ಕೇರಳ ನಿರ್ದೇನದಂತೆ ಪುಟಾಣಿ ವಿದ್ಯಾರ್ಥಿಗಳಲ್ಲಿ ಓದಿನ ಗೀಳನ್ನು ಹೆಚ್ಚಿಸಲು ಮತ್ತು ರಜಾ ಕಾಲದ ಸದುಪಯೋಗಕ್ಕಾಗಿ ಪ್ರತಿ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಬಿ.ಆರ್.ಸಿಯ ಬಿ.ಪಿ.ಸಿ ಜೋಯ್ ಉದ್ಘಾಟಿಸಿದರು. ಶಾಲಾ ಯಸ್.ಎಂ.ಸಿ ಅಧ್ಯಕ್ಷ ಇಬ್ರಾಹಿಂ ಹನೀಫಿ, ಹಿರಿಯ ಶಿಕ್ಷಕ ಇಸ್ಮಾಯಿಲ್ ಯಂ, ಶಿಕ್ಷಕಿ ಧನ್ಯ ಕೆ.ವಿ ಶುಭ ಹಾರೈಸಿದರು. ಕಾರ್ಯಕ್ರಮ ಔಚಿತ್ಯದ ಬಗ್ಗೆ ಶಿಕ್ಷಕ ಅಬ್ದುಲ್ ಬಶೀರ್ ಸವಿವರ ಮಾಹಿತಿ ನೀಡಿದರು.
ಈ ಸಂದರ್ಭ ನಾಲ್ಕನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ನಡೆಯಿತು. ಶಾಲೆಯಿಂದ ನಿರ್ಗಮಿಸುತ್ತಿರುವ ಮಕ್ಕಳಿಗೆ ಶಿಕ್ಷಕಿ ಫಾತಿಮತ್ ಫಸೀನ ಮತ್ತು ರೇಣುಕ ಹಿತನುಡಿಗಳನ್ನಾಡಿ ಕಲಿಕಾ ಕಿಟ್ ನೀಡಿ ಬೀಳ್ಕೊಡಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಶಿಕ್ಷಕ ರಿಯಾಸ್ ಯಂ.ಯಸ್ ವಂದಿಸಿದರು. ಶಿಕ್ಷಕಿ ಅಬ್ಸ ಯಸ್ ಕಾರ್ಯಕ್ರಮ ನಿರೂಪಿಸಿದರು.