ತಿರುವನಂತಪುರ: ಕಾಂಗ್ರೆಸ್ ಮುಖಂಡ ಶಶಿ ತರೂರ್, ಸಿಪಿಎಂ ಮುಖಂಡ ಹಾಗೂ ಕೇರಳ ಸಚಿವ ಕೆ.ರಾಧಾಕೃಷ್ಣನ್, ಸಿಪಿಐ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಆನಿ ರಾಜಾ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ಆಯಂಟನಿ ಮತ್ತಿತರರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬುಧವಾರ ನಾಮಪತ್ರ ಸಲ್ಲಿಸಿದರು.
ಶಶಿ ತರೂರ್ ಅವರು ತಿರುವನಂತಪುರ ಕ್ಷೇತ್ರದಲ್ಲಿ, ರಾಧಾಕೃಷ್ಣನ್ ಅವರು ಆಲತ್ತೂರಿನಲ್ಲಿ, ಆನಿ ಅವರು ವಯನಾಡ್‌ನಲ್ಲಿ ಮತ್ತು ಅನಿಲ್ ಅವರು ಪತ್ತನಂತಿಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಕಾಸರಗೋಡಿನಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಸಂಸದ ರಾಜಮೋಹನ್ ಉಣ್ಣಿತ್ತಾನ್, ಚಾಲಕ್ಕುಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆನ್ನಿ ಬೆಹನಾನ್, ಎರ್ನಾಕುಳಂನಲ್ಲಿ ಸಿಪಿಎಂನಿಂದ ಸ್ಪರ್ಧಿಸುತ್ತಿರುವ ಕೆ.ಜೆ.ಶೈನ್, ಪೊನ್ನಾನಿ ಕ್ಷೇತ್ರದ ಎಲ್‌ಡಿಎಫ್ ಅಭ್ಯರ್ಥಿ ಕೆ.ಎಸ್. ಹಂಝಾ ಅವರೂ ನಾಮಪತ್ರ ಸಲ್ಲಿಸಿದರು. ಕೇರಳದಲ್ಲಿ ಇದೇ 26ರಂದು ಮತದಾನ ನಡೆಯಲಿದೆ.