ಮಧೂರು: ಕರ್ನಾಟಕ ಸರ್ಕಾರದ ಗಡಿನಾಡ ಚೇತನ ಪ್ರಶಸ್ತಿ ಪುರಸ್ಕøತ ಕವಿ, ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರನ್ನು ಉಳಿಯ ತರುಣ ಕಲಾವೃಂದದ ವತಿಯಿಂದ ಅಭಿನಂದಿಸಲಾಯಿತು. ಕಲಾವೃಂದದ ಸಭಾಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಉಳಿಯ ಮನೆತನದ ಮಯೂರ ಆಸ್ರ ಅವರು ಶಾಲು ಹೊದೆಸಿ ಫಲಪುಷ್ಪ, ಸ್ಮರಣಿಕೆ ನೀಡಿ ರಾಧಾಕೃಷ್ಣರನ್ನು ಅಭಿನಂದಿಸಿದರು. ತರುಣ ಕಲಾ ವೃಂದದ ಅಧ್ಯಕ್ಷ ವಿಠಲ ಗಟ್ಟಿ ಪರಕ್ಕಿಲ ಅಧ್ಯಕ್ಷತೆ ವಹಿಸಿದ್ದರು. ಪ್ರಭಾಕರ ಉಳಿಯ, ಸಂತೋಷ್ ಆರ್ ಗಟ್ಟಿ, ಸುರೇಶ್ ಯು ಆರ್, ವಿಶಾಲಾಕ್ಷ ಪುತ್ರಕಳ, ಸುಂದರ ಬಾರಡ್ಕ ಶುಭಹಾರೈಸಿದರು. ಹಿರಿಯ ಸದಸ್ಯ ಬಾಲಕೃಷ್ಣ ಉಳಿಯ ಅವರ ಅಭಿನಂದನಾ ಸಂದೇಶವನ್ನು ವಾಚಿಸಲಾಯಿತು. ಶರಣ್ಯ ಪರಕ್ಕಿಲ ರಾಧಾಕೃಷ್ಣರ ಕುರಿತಾದ ಸ್ವರಚಿತ ಕವನ ವಾಚಿಸಿದರು. ದಿವ್ಯಾ ಗಟ್ಟಿ ಪರಕ್ಕಿಲ ಅಭಿನಂದನಾ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ತರುಣ ಕಲಾವೃಂದದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.