HEALTH TIPS

ಇವಿಎಂ-ವಿವಿಪ್ಯಾಟ್ ಮತಗಳ ಪರಿಶೀಲನೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

             ನವದೆಹಲಿ: ಇವಿವಿಎಂ ಹಾಗೂ ವಿವಿಪ್ಯಾಟ್ ನಲ್ಲಿ ದಾಖಲಾಗಿರುವ ಮತಗಳನ್ನು ಸಂಪೂರ್ಣ ತಾಳೆ ಹಾಕಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

            ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆಗೆ ಸಂಬಂಧಿಸಿದ ಐದು ಪ್ರಶ್ನೆಗಳಿಗೆ ಚುನಾವಣಾ ಆಯೋಗದ ಅಧಿಕಾರಿಯಿಂದ ಉತ್ತರಗಳನ್ನು ಪಡೆದ ನಂತರ ತೀರ್ಪನ್ನು ಕಾಯ್ದಿರಿಸಿತು.

           ಇವಿಎಂಗಳ ಕಾರ್ಯನಿರ್ವಹಣೆಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಈ ಹಿಂದೆ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದ ಹಿರಿಯ ಉಪ ಚುನಾವಣಾ ಆಯುಕ್ತ ನಿತೇಶ್ ಕುಮಾರ್ ವ್ಯಾಸ್ ಅವರನ್ನು ಮಧ್ಯಾಹ್ನ 2 ಗಂಟೆಗೆ ನ್ಯಾಯಾಲಯಕ್ಕೆ ಪೀಠ ಕರೆಸಿತ್ತು. ಇವಿಎಂಗಳ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ನೀಡಿದ ಉತ್ತರಗಳಲ್ಲಿ ಕೆಲವು ಗೊಂದಲಗಳಿರುವುದರಿಂದ ಕೆಲವು ಅಂಶಗಳ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ ಎಂದು ಪೀಠ ಹೇಳಿತ್ತು.

              ಇವಿಎಂನಲ್ಲಿ ಮತಗಳ ಸಂಗ್ರಹ, ಇವಿಎಂ ಕಂಟ್ರೋಲಿಂಗ್ ಯೂನಿಟ್ ನ ಮೈಕ್ರೋ ಚಿಪ್ ಮತ್ತಿತರ ಅಂಶಗಳ ಕುರಿತಂತೆ ಚುನಾವಣಾ ಆಯೋಗದಿಂದ ನ್ಯಾಯಾಲಯ ಸ್ಪಷ್ಟನೆ ಕೇಳಿತ್ತು. ವಿವಿಪ್ಯಾಟ್ ಸ್ವತಂತ್ರ ಮತ ಪರಿಶೀಲನಾ ವ್ಯವಸ್ಥೆಯಾಗಿದ್ದು, ಮತದಾರರು ತಮ್ಮ ಮತಗಳನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಎಂದು ನೋಡಲು ಅನುವು ಮಾಡಿಕೊಡುತ್ತದೆ.

              ಮತದಾರರ ಸಂತೃಪ್ತಿ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ನಂಬಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ನ್ಯಾಯಪೀಠ,. ಇವಿಎಂಗಳ ಪರಿಣಾಮಕಾರಿತ್ವವನ್ನು ಅನುಮಾನಿಸದಂತೆ ಬ್ಯಾಲೆಟ್ ಪೇಪರ್‌ಗಳ ಬಳಕೆಗೆ ಹಿಂತಿರುಗಲು ನಿರ್ದೇಶನವನ್ನು ಕೋರಿದ ಅರ್ಜಿದಾರರಿಗೆ ಚುನಾವಣಾ ಆಯೋಗ ಉತ್ತಮ ಕೆಲಸ ಮಾಡಿದರೆ ಪ್ರಶಂಸಿಸುವಂತೆ ಹೇಳಿತು.

               ವಿವಿಪ್ಯಾಟ್ ಯಂತ್ರಗಳಲ್ಲಿನ ಪಾರದರ್ಶಕ ಗಾಜನ್ನು ಬದಲಾಯಿಸಿ ಅಪಾರದರ್ಶಕ ಗಾಜು ಅಳವಡಿಸಿದ 2017ರ ಚುನಾವಣಾ ಆಯೋಗದ ನಿರ್ಧಾರವನ್ನು ರದ್ದುಗೊಳಿಸುವಂತೆ ಅರ್ಜಿದಾರರಾದ ಎನ್‌ಜಿಒ 'ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' (ಎಡಿಆರ್) ಪರ ವಕೀಲ ಪ್ರಶಾಂತ್ ಭೂಷಣ್ ಕೋರಿದ ಅರ್ಜಿಗೆ ನ್ಯಾಯಪೀಠ ಈ ಹೇಳಿಕೆ ನೀಡಿತು. ಬದಲಾದ ಗಾಜಿನ ಮೂಲಕ ಮತದಾರರು ಏಳು ಸೆಕೆಂಡುಗಳ ಕಾಲ ಲೈಟ್ ಆನ್ ಆಗಿರುವಾಗ ಮಾತ್ರ ಮತದಾನ ಮಾಡಿದ ಟಿಯನ್ನು ನೋಡಬಹುದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries