ಮಾಲೆ: ಮಾಲ್ದೀವ್ಸ್‌ನಲ್ಲಿ ನೆಲೆಗೊಂಡಿರುವ ಭಾರತೀಯ ಸೇನೆಯ ಎರಡನೇ ತಂಡ ತನ್ನ ಬೇಡಿಕೆಯಂತೆ ದ್ವೀಪ ರಾಷ್ಟ್ರವನ್ನು ತೊರೆದಿದೆ ಎಂದು ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಜು ಹೇಳಿದ್ದಾರೆ.
ಮಾಲೆ: ಮಾಲ್ದೀವ್ಸ್‌ನಲ್ಲಿ ನೆಲೆಗೊಂಡಿರುವ ಭಾರತೀಯ ಸೇನೆಯ ಎರಡನೇ ತಂಡ ತನ್ನ ಬೇಡಿಕೆಯಂತೆ ದ್ವೀಪ ರಾಷ್ಟ್ರವನ್ನು ತೊರೆದಿದೆ ಎಂದು ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಜು ಹೇಳಿದ್ದಾರೆ.
ಭಾರತದ ಮೊದಲ ಸೇನಾ ತಂಡ ಈಗಾಗಲೇ ಹೋಗಿದೆ. ಏಪ್ರಿಲ್ 9ರಂದು ಎರಡನೇ ತಂಡ ಸಹ ತೆರಳಿದೆ.
ಎರಡನೇ ತಂಡದಲ್ಲಿ ಎಷ್ಟು ಸೇನಾ ಸಿಬ್ಬಂದಿ ಮಾಲ್ದೀವ್ಸ್ ತೊರೆದಿದ್ದಾರೆ ಎಂಬ ಮಾಹಿತಿಯನ್ನು ಅಧ್ಯಕ್ಷರು ನೀಡಲಿಲ್ಲ. ಈ ಸಂಬಂಧ ಮಾಲ್ದೀವ್ಸ್ ರಕ್ಷಣಾ ಸಚಿವಾಲಯ ಅಥವಾ ಭಾರತ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮುಯಿಜು ಅವರು ತನ್ನ ದೇಶದಿಂದ ಭಾರತೀಯ ಸೇನಾ ಸಿಬ್ಬಂದಿಯ ಮೊದಲ ತಂಡ ಮಾರ್ಚ್ 10ರೊಳಗೆ ಹಿಂತೆಗೆದುಕೊಳ್ಳಬೇಕು ಎಂದು ಗಡುವು ನಿಗದಿಪಡಿಸಿದ್ದರು.
ಚೀನಾ ಪರ ನಿಲುವಿನ ಹೊಂದಿರುವ ಮುಯಿಜು, ಮಾಲೆಯಲ್ಲಿರುವ ವಿದೇಶಿ ರಾಯಭಾರಿಗಳು ತನ್ನ ಮೇಲೆ ಅಧಿಕಾರಿ ಚಲಾಯಿಸಲು ಬಿಡುವುದಿಲ್ಲ ಎಂದು ಪುನರುಚ್ಚರಿಸಿದರು.
ಮಾಲೆಯ ಮಾಜಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು, ಯಾವುದೇ ದೇಶದ ಹೆಸರನ್ನು ಉಲ್ಲೇಖಿಸಿದೇ, ವಿದೇಶಿ ರಾಯಭಾರಿ ಆದೇಶದ ಮೇರೆಗೆ ದೇಶದಲ್ಲಿ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಕಳೆದ ತಿಂಗಳು ಆರೋಪಿಸಿದ್ದರು.