ನವದೆಹಲಿ: ಮತ ಚಲಾಯಿಸುವ ಹಕ್ಕಿನಿಂದ ಯಾವುದೇ ಅರ್ಹ ಮತದಾರ ವಂಚಿತನಾಗಬಾರದು ಎಂಬ ಕಾರಣದಿಂದ ಕಾಗುಣಿತ, ಮುದ್ರಣ ದೋಷವಿದ್ದರೆ ಅದನ್ನು ಕಡೆಗಣಿಸಿ ಅರ್ಹ ಗುರುತುಚೀಟಿ ಆಧರಿಸಿ ಮತ ಚಲಾವಣೆಗೆ ಅವಕಾಶ ಕಲ್ಪಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.
ನವದೆಹಲಿ: ಮತ ಚಲಾಯಿಸುವ ಹಕ್ಕಿನಿಂದ ಯಾವುದೇ ಅರ್ಹ ಮತದಾರ ವಂಚಿತನಾಗಬಾರದು ಎಂಬ ಕಾರಣದಿಂದ ಕಾಗುಣಿತ, ಮುದ್ರಣ ದೋಷವಿದ್ದರೆ ಅದನ್ನು ಕಡೆಗಣಿಸಿ ಅರ್ಹ ಗುರುತುಚೀಟಿ ಆಧರಿಸಿ ಮತ ಚಲಾವಣೆಗೆ ಅವಕಾಶ ಕಲ್ಪಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.
ಗುರುತುಚೀಟಿಯಲ್ಲಿ ಇರುವ ಭಾವಚಿತ್ರ ಹೋಲಿಕೆ ಆಗದಿದ್ದಲ್ಲಿ, ಆಯೋಗವು ಪಟ್ಟಿ ಮಾಡಿರುವ ಮತದಾರರ ಭಾವಚಿತ್ರವುಳ್ಳ ಪರ್ಯಾಯ ಗುರುತುಚೀಟಿಯನ್ನು ಗುರುತು ಸಾಬೀತಿಗೆ ಮತದಾರರು ಹಾಜರುಪಡಿಸಬಹುದು ಎಂದು ತಿಳಿಸಿದೆ.
ಮತದಾರರ ಗುರುತುಚೀಟಿ ಇಲ್ಲದವರು ಪರ್ಯಾಯವಾಗಿ ಭಾವಚಿತ್ರವುಳ್ಳ ವಿವಿಧ ಗುರುತುಚೀಟಿಗಳನ್ನು ಮತ ಚಲಾವಣೆಯ ವೇಳೆ ತೋರಿಸಲು ಆಯೋಗ ಅವಕಾಶ ಕಲ್ಪಿಸಿದೆ. ಇವುಗಳಲ್ಲಿ ಆಧಾರ್ ಕಾರ್ಡ್, ಉದ್ಯೋಗ ಖಾತ್ರಿ ಜಾಬ್‌ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಭಾವಚಿತ್ರವುಳ್ಳ ಪಾಸ್‌ಬುಕ್, ವಾಹನ ಚಾಲನೆ ಪರವಾನಗಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಸರ್ಕಾರ ಮತ್ತು ಸಾರ್ವಜನಿಕ ವಲಯ ಸಂಸ್ಥೆಗಳ ಗುರುತುಚೀಟಿಗಳು, ಅಂಗವಿಕಲರಿಗೆ ಸಂಬಂಧಿತ ಸಚಿವಾಲಯ ನೀಡಿರುವ ಗುರುತುಚೀಟಿ ಸೇರಿವೆ.