ಕಾಸರಗೊಡು: ಎನ್‍ಡಿಎ ಚುನಾವಣಾ ಪ್ರಚಾರಾರ್ಥ ಕೇಂದ್ರ ಗೃಹಸಚಿವ, ಬಿಜೆಪಿ ಮಾಜಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರಾಜನಾಥ್ ಸಿಂಗ್ ಏ. 17ರಂದು ಕಾಸರಗೋಡಿಗೆ ಭೇಟಿ ನೀಡುವರು. ಅಂದು ಬೆಳಗ್ಗೆ 10ಕ್ಕೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ವಿಶೇಷವಾಗಿ ಸಜ್ಜುಗೊಳಿಸಲಾದ ಸಭಾಂಗಣದಲ್ಲಿ ಎನ್‍ಡಿಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯ ಭಾಷಣ ಮಾಡುವರು. ರಾಜ್ಯ, ಜಿಲ್ಲಾ ಮಟ್ಟದ ಬಿಜೆಪಿ, ಎನ್‍ಡಿಎ ಮುಖಂಡರು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.