ಕಾಸರಗೋಡು: ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಪೂರ್ವಭಾವಿಯಾಘಿ ಗೊನೆ ಮುಹೂರ್ತ ದಏವಾಲಯದಲ್ಲಿ ನೆರವೇರಿತು. ಸಮಾರಂಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ. ರಾಜೇಶ್, ಮಣಂಗಳ ತರವಾಡಿನ ವಕೀಲ ಅನಂತರಾಮ, ಸುಬ್ರಹ್ಮಣ್ಯ ಶರ್ಮ, ದೇವಸ್ಥಾನದ ಹಿರಿಯ ಅಧಿಕಾರಿ ಬಿ.ಎನ್ ಸುಬ್ರಹ್ಮಣ್ಯ, ದೇಗುಲ ಸಿಬ್ಬಂದಿ ವರ್ಗದವರು, ಭಕ್ತಾದಿಗಳು ಉಪಸ್ಥಿತರಿದ್ದರು.
ದೇವಸ್ಥಾನದಲ್ಲಿ ಏ. 13ರಿಂದ 17ರ ವರೆಗೆ ಜಾತ್ರಾ ಮಹೋತ್ಸವ ನಡೆಯುವುದು. ಏ. 14ರಂದು ವಿಷು ಆಚರಣೆ, 16ರಂದು ಮಧೂರು ಬೆಡಿ ಉತ್ಸವ ನಡೆಯಲಿರುವುದು.