ಕಾಸರಗೋಡು ಕರಂದಕ್ಕಾಡು ಶ್ರೀ ವೀರ ಹನುಮಾನ್ ಮಂದಿರದ 22 ನೇ ವಾರ್ಷಿಕ ದಿನಾಚರಣೆ ಏ.27 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಗ್ಗೆ 6 ಕ್ಕೆ ಗಣಪತಿ ಹೋಮ, 8 ಕ್ಕೆ ದೀಪಾರಾಧನೆ, 8.15 ಕ್ಕೆ ಶ್ರೀ ವೀರ ಹನುಮಾನ್ ಬಾಲಗೋಕುಲದ ಮಕ್ಕಳಿಂದ ಶ್ರೀರಾಮ ರಕ್ಷಾ ಸ್ತೋತ್ರ ಪಾರಾಯಣ, 9 ಕ್ಕೆ ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, 12.30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
12.30 ರಿಂದ ನಾಟ್ಯ ಮಂಟಪ ಮಧೂರು ಇದರ ಸೌಮ್ಯ ಶ್ರೀಕಾಂತ್ ಅವರ ಶಿಷ್ಯರಿಂದ ನಾಟ್ಯಾರ್ಚನೆ, ಅಪರಾಹ್ನ 3 ಕ್ಕೆ ಮಂದಿರ ಪರಿಸರದ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸಂಜೆ 6 ಕ್ಕೆ ನೃತ್ಯಂ ಬೀರಂತಬೈಲು ಇದರ ಲತಾ ಶಶಿಧರನ್ ಅವರ ಶಿಷ್ಯೆಯರಿಂದ ನೃತ್ಯ ಸೌರಭ, ಸೂರ್ಯಾಸ್ತಮಾನಕ್ಕೆ ಕರಂದಕ್ಕಾಡು ಶ್ರೀ ವೀರ ಹನುಮಾನ್ ಭಜನಾ ಸಂಘದಿಂದ ಭಜನೆ, ರಾತ್ರಿ 8.15 ಕ್ಕೆ ದೇಹದಾಢ್ರ್ಯ ಪ್ರದರ್ಶನ, 9.30 ಕ್ಕೆ ವಿಶೇಷ ಪೂಜೆ, 10 ಕ್ಕೆ ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರಿಂದ ತುಳು ನಾಟಕ ತನಿಯಜ್ಜೆ ಪ್ರದರ್ಶನಗೊಳ್ಳಲಿದೆ.