ಮಂಜೇಶ್ವರ : ಮಂಜೇಶ್ವರದ ಶಾರದ ಆಟ್ರ್ಸ್ ಕಲಾವಿದರ ಈ ವರ್ಷದ ಸೂಪರ್‍ಹಿಟ್ ನಾಟಕ, 'ಕಥೆ ಎಡ್ಡೆಂಡು'ತುಳು ಹಾಸ್ಯಮಯ ನಾಟಕದ ನೂರನೇ ಪ್ರದರ್ಶನ ಸಂಭ್ರಮ ಏ. 20ರಂದು ಸಂಜೆ 6ಕ್ಕೆ ಮಂಗಳೂರು ಕದ್ರಿ ಮೈದಾನದಲ್ಲಿ ಜರುಗಲಿದೆ. ಜೆ.ಪಿ ತೂಮಿನಾಡು ನಾಟಕ ರಚಿಸಿದ್ದು, ಕೃಷ್ಣ ಜಿ.ಮಂಜೇಶ್ವರ ನಿರ್ದೇಶನ ಹಾಗೂ ಪ್ರಕಾಶ್ ತೂಮಿನಾಡು ಅಭಿನಯಿಸಿದ್ದಾರೆ.
ಕೃಷ್ಣ ಜಿ. ಮಂಜೇಶ್ವರ ಸಾರಥ್ಯದ ಶಾರದಾ ಆಟ್ರ್ಸ್ ತಂಡ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, 22ಮಮದಿ ಕಲಾವಿದರಿದ್ದು, 50ಕ್ಕೂ ಹೆಚ್ಚು ನಾಟಕಗಳು ಪರದರ್ಶನಗೊಂಡಿದೆ.