ಕಾಸರಗೋಡು: ಲೋಕಸಭಾ ಕ್ಷೇತ್ರದ ಚುನಾವಣಾ ಚಟುವಟಿಕೆಗಳ ಅಂಗವಾಗಿ ಮತ ಯಂತ್ರಗಳ ಕಮಿಷನಿಂಗ್, ಪೆÇೀಲಿಂಗ್ ಡ್ಯೂಟಿ ಆಫೀಸರ್‍ಗಳಿಗೆ ತರಬೇತಿ, ಪೆÇೀಸ್ಟಲ್ ಬ್ಯಾಲೆಟ್, ಮನೆಯಲ್ಲೇ ಮತದಾನ ಹಾಗೂ 26 ರಂದು ಮತದಾನಕ್ಕೆ ಸಿದ್ಧತೆಗಾಗಿ ವಿವಿಧ ಹಂತಗಳಲ್ಲಿ ಪಾರದರ್ಶಕ ಮತ್ತು ದಕ್ಷ ಯೋಜನೆ ಬಗ್ಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ. ಅವರು ಕಾಸರಗೋಡು ಜಿಲ್ಲಾಧಿಕಾರಿ ಸಬಾಂಗಣದಲ್ಲಿ ಆಯೋಜಿಸಲಾದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಸಂದರ್ಭ ಮತದಾರರ ಪಟ್ಟಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಏಜೆಂಟರಿಗೆ ಹಸ್ತಾಂತರಿಸಿ, ಎಪಿಕ್ ಕಾರ್ಡ್ ವಿತರಿಸಲಾಯಿತು.
ಇಂದು ಇವಿಎಂ ರಾಂಡಮೈಸೇಶನ್:
ಇವಿಎಂ ಎರಡನೇ ರ್ಯಾಂಡಮೈಸೇಷನ್ 16ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜನರಲ್ ಒಬ್ಸರ್ವರ್ ಉಪಸ್ಥಿತಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಅಥವಾ ಅವರ ಏಜೆಂಟ್‍ಗಳು ಕಡ್ಡಾಯವಾಗಿ ಹಾಜರಾಗಬೇಕಾಗಿದೆ. ಏಪ್ರಿಲ್ 16 ರಂದು ಬೆಳಿಗ್ಗೆ 11 ಗಂಟೆಗೆ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗುವುದು. ರಾಜಕೀಯ ಪಕ್ಷದ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ವಿದ್ಯುನ್ಮಾನ ಮತ ಯಂತ್ರವನ್ನು (ಇವಿಎಂ) ಪ್ರತ್ಯೇಕವಾಗಿ ತೆಗೆದು ವಿಂಗಡಿಸಲಾಗುವುದು.
17ರಂದು ಬೆಳಗ್ಗೆ 7ರಿಂದ ಇವಿಎಂ ಕಮಿಷನಿಂಗ್ ನಡೆಯಲಿದೆ. ಇದು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯನ್ನು ಅಳವಡಿಸುವ ಕಾರ್ಯವಾಗಿದ್ದು, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕಾರ್ಯಾರಂಭದ ಸಮಯದಲ್ಲಿ ಶೇಕಡಾ ಐದು ಇವಿಎಂ ಅಣಕು ಮತದಾನ ನಡೆಯಲಿದ್ದು, ಇದನ್ನು ಪ್ರತ್ಯೇಕವಾಗಿ ದಾಖಲಿಸಲಾಗುವುದು. ಕಮಿಷನಿಂಗ್ ಪೂರ್ತಿಗೊಂಡಲ್ಲಿ, ಏಪ್ರಿಲ್ 25 ರಂದು ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲು ಮಾತ್ರ ಇವಿಎಂ ಯಂತ್ರಗಳನ್ನು ತೆರೆಯಲಾಗುತ್ತದೆ. 26ರಂದು ಮತದಾನ ನಡೆಯಲಿದೆ. ಮತಗಳು ದಾಖಲಾದ ಇವಿಎಂ ಯಂತ್ರಗಳನ್ನು ವಿತರಿಸಿದ ಕೇಂದ್ರದಲ್ಲಿಯೇ ಸ್ವೀಕರಿಸಲಾಗುವುದು. ಇವಿಎಂ ಯಂತ್ರಗಳನ್ನು ಪೆರಿಯಾದ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಇರಿಸಲಾಗುವುದು. ಏಪ್ರಿಲ್ 26 ರಿಂದ ಜೂನ್ 4 ರವರೆಗೆ ಮತಯಂತ್ರಗಳನ್ನಿರಿಸಿದ ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಸಂಪೂರ್ಣ ನಿಗಾ ವಹಿಸಲಾಗುವುದು.