ಕಾಸರಗೋಡು: ಕಣ್ಣೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ವಕೀಲ ಕೆ.ಕರುಣಾಕರನ್ ನಂಬಿಯಾರ್ ಅವರಿಗೆ ಸನ್ಮಾನ ಸಮಾರಂಭ ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.
ಕೋ-ಆಪರೇಟಿವ್ ಟೌನ್ ಬ್ಯಾಂಕ್ ಆಡಳಿತ ಮಂಡಳಿ ಮತ್ತು ನೌಕರರ ವತಿಯಿಂದ ಸನ್ಮಾನ ಆಯೋಜಿಸಲಾಗಿತ್ತು. ವಕೀಲ ಕರುಣಾಕರನ್ ನಂಬ್ಯಾರ್ ಅವರು ಟೌನ್ ಬ್ಯಾಂಕ್ ನಿರ್ದೇಶಕರಾಗಿಯೂ ಸಏವೆ ಸಲ್ಲಿಸುತ್ತಿದ್ದಾರೆ.
ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ, ವಕೀಲ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಮಾಧವ ಹೇರಳ, ಸಿಇಒ ಆರ್.ವಿ.ಸುರೇಶ್, ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥೀತರಿದ್ದರು. ವಕೀಲ ಕರುಣಾಕರನ್ ನಂಬ್ಯಾರ್ ಅವರನ್ನು ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಶಿಫಾರಸಿನನ್ವಯ ಸೆನೆಟ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.