ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ಹೊಸ ಲೋಗೋ ಪರಿಚಯಿಸಲಾಗಿದ್ದು, ಕೇಸರಿ ಬಣ್ಣ ನೀಡಲಾಗಿದೆ. ಈ ಹಿಂದೆ ಕೆಂಪು ಬಣ್ಣದಲ್ಲಿ ಲೋಗೋ ವಿನ್ಯಾಸ ಮಾಡಲಾಗಿತ್ತು. ಕೇಸರಿ ಬಣ್ಣದಲ್ಲಿ ಲೋಗೋ ವಿನ್ಯಾಸ ಮಾಡಲಾಗಿರುವುದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗತೊಡಗಿದೆ.
ದೂರ ದರ್ಶನ ಚಾನಲ್ ನ ಇಂಗ್ಲೀಷ್ ಸುದ್ದಿ ವಿಭಾಗ ಡಿಡಿ ನ್ಯೂಸ್ ಹೊಸ ಲೋಗೋವನ್ನೊಳಗೊಂಡ ಪ್ರಚಾರದ ವೀಡಿಯೊವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿತ್ತು.
"ನಮ್ಮ ಮೌಲ್ಯಗಳು ಹಾಗೆಯೇ ಇರುತ್ತವೆ, ನಾವು ಈಗ ಹೊಸ ಅವತಾರದಲ್ಲಿ ಲಭ್ಯವಿದ್ದೇವೆ. ಹಿಂದೆಂದಿಗಿಂತಲೂ ವಿಭಿನ್ನವಾದ ಸುದ್ದಿ ಪ್ರಯಾಣಕ್ಕೆ ಸಿದ್ಧರಾಗಿ... ಹೊಸ ಡಿಡಿ ನ್ಯೂಸ್ ನ ಅನುಭೂತಿ ಪಡೆಯಿರಿ ಎಂದು ಶೀರ್ಷಿಕೆಯಲ್ಲಿ ದೂರದರ್ಶನ ಹೇಳಿತ್ತು.
ಹೊಸ ಲೋಗೋ ಸಾಮಾಜಿಕ ಜಾಲತಾಣಗಳಲ್ಲು ಹಲವು ಟೀಕೆಗಳನ್ನು ಎದುರಿಸಿತು ಮತ್ತು ಹಲವಾರು ಬಳಕೆದಾರರು ಇದು ಕೇಸರಿ ಬಣ್ಣವಾಗಿದ್ದು ಈ ಕ್ರಮ ಚುನಾವಣೆಯ ಮುಂಚೆಯೇ ಬಂದಿದೆ. ದೂರದರ್ಶನದ ಮಾತೃಸಂಸ್ಥೆಯ ಮಾಜಿ ಮುಖ್ಯಸ್ಥ, ಹಾಲಿ ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸಿರ್ಕಾರ್ ಕೂಡ ಚುನಾವಣೆಗೆ ಮುನ್ನ ದೂರದರ್ಶನದ ಲೋಗೋದ "ಕೇಸರಿಕರಣ"ವನ್ನು ನೋಡುವುದು ನೋವುಂಟುಮಾಡುತ್ತದೆ ಎಂದು ಹೇಳಿದ್ದಾರೆ.
"ರಾಷ್ಟ್ರೀಯ ಪ್ರಸಾರಕ ದೂರದರ್ಶನ ತನ್ನ ಐತಿಹಾಸಿಕ ಪ್ರಮುಖ ಲೋಗೋವನ್ನು ಕೇಸರಿ ಬಣ್ಣದಲ್ಲಿ ಚಿತ್ರಿಸಿದೆ! ಅದರ ಮಾಜಿ ಸಿಇಒ ಆಗಿ, ನಾನು ಅದರ ಕೇಸರಿಕರಣವನ್ನು ಎಚ್ಚರಿಕೆಯಿಂದ ನೋಡುತ್ತಿದ್ದೇನೆ - ಇದು ಪ್ರಸಾರ ಭಾರತಿ ಅಲ್ಲ - ಇದು ಪ್ರಚಾರ ಭಾರತಿ," ಎಂದು ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸಿರ್ಕಾರ್ ಆನ್‌ಲೈನ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸರ್ಕಾರ್ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊವನ್ನು ಮೇಲ್ವಿಚಾರಣೆ ಮಾಡುವ ಶಾಸನಬದ್ಧ ಸಂಸ್ಥೆಯಾದ ಪ್ರಸಾರ ಭಾರತಿಯ ಸಿಇಒ ಆಗಿ 2012 ರಿಂದ 2016 ರವರೆಗೆ ಸೇವೆ ಸಲ್ಲಿಸಿದ್ದರು.
ಆದರೆ ಪ್ರಸಾರ ಭಾರತಿಯ ಹಾಲಿ ಮುಖ್ಯಸ್ಥ ಗೌರವ್ ದ್ವಿವೇದಿ, ಮಾಜಿ ಮುಖ್ಯಸ್ಥರ ಆರೋಪಗಳನ್ನು ತಿರಸ್ಕರಿಸಿದ್ದು, ದೃಶ್ಯ ಸೌಂದರ್ಯಕ್ಕೆ ಅನುಗುಣವಾಗಿ ಈ ಕ್ರಮಅಗತ್ಯವೆಂದು ಸಮರ್ಥಿಸಿದ್ದಾರೆ. ವಾಸ್ತವದಲ್ಲಿ ಸ್ವತಃ ತಾವೂ ಸಹ ಕೇಸರಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಗೌರವ್ ದ್ವಿವೇದಿ ಹೇಳಿದ್ದಾರೆ. ಪ್ರಕಾಶಮಾನವಾದ, ಆಕರ್ಷಕವಾದ ಬಣ್ಣವನ್ನು ಬಳಸುವುದು ಚಾನಲ್‌ನ ಬ್ರ್ಯಾಂಡಿಂಗ್ ಮತ್ತು ದೃಶ್ಯ ಸೌಂದರ್ಯಕ್ಕೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.