HEALTH TIPS

ಎಡನೀರಲ್ಲಿ ಭೂಮಿಕಾ ಪ್ರತಿಷ್ಠಾನದ ಕನ್ನಡ ಸಂಸ್ಕೃತಿ ಶಿಬಿರ ಸಮಾರೋಪ

             ಬದಿಯಡ್ಕ: ಸದಭಿರುಚಿಯ, ಬದುಕನ್ನು ಉನ್ನತಿಗೊಯ್ಯುವ ಅರಿವು ಎಲ್ಲಿದ್ದರೂ ಅದನ್ನು ಕರಗತಗೊಳಿಸುವಲ್ಲಿ ವಿದ್ಯಾರ್ಥಿಗಳು ತೆರೆದ ಹೃದಯದವರಾಗಿರಬೇಕು. ಸಾಗರದಂತೆ ಸರ್ವವವನ್ನೂ ಸ್ವೀಕರಿಸಿ, ಬೇಕಿದ್ದನ್ನು ಮಾತ್ರ ಇರಿಸಿಕೊಳ್ಳುವ, ಆರ್ದ್ರ ಮಣ್ಣಿನಂತೆ ಆಕಾರಗೊಳಿಸಿಕೊಳ್ಳುವ ಮೃದುತ್ವ ಬೆಳವಣಿಗೆಯ ಸ್ವರೂಪ. ಈ ನಿಟ್ಟಿನಲ್ಲಿ ಪೋಷಕರ ಪಾತ್ರವೂ ಮಹತ್ತg Àದು ಎಂದು ಖ್ಯಾತ ಯಕ್ಷಿಣಿಗಾರ ಪ್ರೊ.ಶಂಕರ್ ಕರೆನೀಡಿದರು.

               ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದೊಂದಿಗೆ ಎಡನೀರು ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಶಾಲೆಯಲ್ಲಿ ನಡೆದ ಆರು ದಿನಗಳ ಕನ್ನಡ ಸಂಸ್ಕೃತಿ ಶಿಬಿರ 2024 ರ ಶನಿವಾರ ನಡೆದ ‘ಅಕ್ಷಯ ವಸಂತ’ ಸಮಾರೋಪದಲ್ಲಿ ಅವರು ಮಾತನಾಡಿದರು.

         ತಮ್ಮ ಗಿಲಿ-ಗಿಲಿ ತಂಡದ 60ನೇ ವಸಂತದ ಅಂಗವಾಗಿ  ಮಾದಕ ದ್ರವ್ಯಗಳ ವಿರುದ್ದ ಜಾಗೃತಿ, ನೈರ್ಮಲ್ಯ ನಿರ್ವಹಣೆ, ಮೌಢ್ಯ ನಿರ್ಮಿತ ಕಲ್ಪನಾ ಬದುಕಿನಿಂದ ಪಾರಾಗುವ ಚಾಕಚಕ್ಯ ನಡೆಗಳ ಬಗ್ಗೆ ದೇಶಾದ್ಯಂತ ವಿಸ್ಕøತವಾದ ಅಕ್ಷಯ ವಸಂತ ಕಾರ್ಯಕ್ರಮ ಆಯೋಜಿಸಿದ್ದು, ಈ ಮೂಲಕ ಜಾಗೃತ ಸಮಾಜ-ರಾಷ್ಟ್ರ ನಿರ್ಮಾಣದ ಲಕ್ಷ್ಯ ಇದರದ್ದು. ಭೂಮಿಕಾ ಪ್ರತಿಷ್ಠಾನದಿಂದ ಉಚಿತವಾದ ಇಂತಹ ಶಿಬಿರ ನಿಜವಾಗಿಯೂ ಸುಧಾರಣಾ ತತ್ಪರತೆಗೆ ಭೂಷಣ ಎಂದರು.

             ಪ್ರತಿಷ್ಠಾನದ ಅಧ್ಯಕ್ಷೆ ವಿದುಷಿಃ ಅನುಪಮಾ ರಾಘವೇಂದ್ರ  ಉಡುಪಮೂಲೆ ಉಪಸ್ಥಿತರಿದ್ದು, ಶಿಬಿರದ ಯಶಸ್ಸಿಗೆ ಕಾರಣರಾದ ಸರ್ವರರನ್ನೂ ಅಭಿನಂದಿಸಿದರು. ಜ್ಯೂನಿಯರ್. ಶಂಕರ್ ಉಪಸ್ಥಿತರಿದ್ದರು. 

         ಸಮಾರೋಪದ ದಿನ ಬೆಳಗ್ಗೆ ಮನಃಶಾಸ್ತ್ರಜ್ಞೆ  ರಶ್ಮಿ ಅವರಿಂದ ಮನೋನಿಗ್ರಹ, ನಿರ್ವಹಣೆ, ಲಕ್ಷ್ಯಪ್ರಾಪ್ತಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ನಡೆಯಿತು. ಬಳಿಕ ಪ್ರೊ.ಶಂಕರ್-ಜ್ಯೂನಿಯರ್ ಶಂಕರ್ ಅವರಿಂದ ಜಾದೂ ಸಹಿತವಾದ ಅಕ್ಷಯ ವಸಂತ ಜಾಗೃತಿ ಕಾರ್ಯಕ್ರಮ ನಡೆಯಿತು. 

              ಶಿಬಿರದಲ್ಲಿ  ಭಾಗವಹಿಸಿದ್ದ ಮಕ್ಕಳ ಹೆತ್ತವರ ಪರವಾಗಿ ಡಾ.ಸೌಮ್ಯ, ಅಕ್ಷತ ಭಟ್, ಶಿಬಿರಾರ್ಥಿಗಳು ಅನುಭವ ಹಂಚಿಕೊಂಡರು. ವಿದುಷಿಃ ಅನುಪಮಾ ರಾಘವೇಂದ್ರ ಸ್ವಾಗತಿಸಿ, ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries