ಕುಂಬಳೆ: ಪೇರಾಲ್‍ಕಣ್ಣೂರು ಸರ್ಕಾರಿ ಜ್ಯೂನಿಯರ್ ಬೇಸಿಕ್ ಶಾಲೆ ಆವರಣದಲ್ಲಿ ನೆಟ್ಟುಬೆಳೆಸಲಾದ ತರಕಾರಿ ಸಸಿ, ಹೂವಿನಗಿಡ, ಗ್ರೋಬ್ಯಾಗ್‍ನಲ್ಲಿ ಅಳವಡಿಸಲಾಗಿದ್ದ ವಿವಿಧ ತರಕಾರಿ ಬೀಜ, ಹೂವಿನ ಕುಂಡಗಳನ್ನು ಕಿಡಿಗೇಡಿಗಳು ಹಾನಿಗೈದಿದ್ದಾರೆ.
ಕೃಷಿಭವನ ಹಾಗೂ ಇತರೆಡೆಯಿಂದ ಸಂಗ್ರಹಿಸಿ ತಂದು ತರಕಾರಿ ಹಾಗೂ ಹೂವಿನ ಗಿಡಗಳನ್ನು ಬೆಳೆಸಲಾಗಿತ್ತು. ಕುಡಿಯುವ ನೀರಿನ ಪೈಪಿಗೂ ಹಾನಿಯೆಸಗಲಾಗಿದೆ. ಶಾಲೆಯಲ್ಲಿ ಕಿಡಿಗೇಡಿ ಕೃತ್ಯ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಶಾಲೆಗೆ ಸಿಸಿ ಕ್ಯಾಮರಾ ಅಳವಡಿಸಲು ಹಣ ಮಂಜೂರುಗೊಳಿಸುವಂತೆ ಶಾಲಾ ರಕ್ಷಕ ಶಿಕ್ಷಕ ಸಂಘ ಸರ್ಕಾರವನ್ನು ಒತ್ತಾಯಿಸಿದೆ. ಈ ಬಗ್ಗೆ ಶಾಲಾ ಸಮಿತಿ ಹಾಗೂ ಶಿಕ್ಷಕ ರಕ್ಷಕ ಸಂಘ ಪೊಲೀಸರಿಗೆ ದೂರು ನೀಡಿದೆ.