HEALTH TIPS

ಭಾರತದ ಅತಿದೊಡ್ಡ ರಕ್ಷಣಾ ರಫ್ತು ಒಪ್ಪಂದ: ಬ್ರಹ್ಮೋಸ್ ಕ್ಷಿಪಣಿ ಫಿಲಿಪೈನ್ಸ್ ತಲುಪಲು ಸಜ್ಜು!

           ನವದೆಹಲಿ: ಭಾರತದ ಮೊದಲ ಪ್ರಮುಖ ರಕ್ಷಣಾ ರಫ್ತು ಒಪ್ಪಂದದ ಪರಾಕಾಷ್ಠೆಯನ್ನು ಗುರುತಿಸುವ ಮೂಲಕ ಫಿಲಿಪೈನ್ಸ್ ಶುಕ್ರವಾರ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಲಿದೆ. ನಾಗರಿಕ ವಿಮಾನಯಾನ ಏಜೆನ್ಸಿಗಳ ಗಮನಾರ್ಹ ಬೆಂಬಲದೊಂದಿಗೆ ಭಾರತೀಯ ವಾಯುಪಡೆ ನೇತೃತ್ವದಲ್ಲಿ ಭಾರೀ ಉಪಕರಣಗಳನ್ನು ಸಾಗಿಸಲಾಗುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಫಿಲಿಪೈನ್ಸ್‌ನ ಪಶ್ಚಿಮ ಭಾಗವನ್ನು ಕ್ಷಿಪಣಿ ತಲುಪವ ಮೊದಲು ವಿಮಾನ ತಡೆರಹಿತ ಆರು ಗಂಟೆಗಳ ಪ್ರಯಾಣ ಮಾಡಲಿದೆ ಎಂದು ಮತ್ತೊಂದು ಮೂಲ ಹೇಳಿದೆ.

           ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಪೂರೈಕೆಗಾಗಿ ಭಾರತ ಜನವರಿ 2022 ರಲ್ಲಿ ಫಿಲಿಪೈನ್ಸ್‌ನೊಂದಿಗೆ ಒಪ್ಪಂದವನ್ನು ಘೋಷಿಸಿತ್ತು.ಇದು ದೇಶದ ಮೊದಲ ಪ್ರಮುಖ ರಕ್ಷಣಾ ರಫ್ತು ಆರ್ಡರ್ ಆಗಿದೆ. ನೋಟೀಸ್‌ಗೆ ಮೂಲತಃ ಡಿಸೆಂಬರ್ 31, 2021 ರಂದು ಸಹಿ ಹಾಕಲಾಗಿತ್ತು.TNIE ಈ ಹಿಂದೆ ವರದಿ ಮಾಡಿದಂತೆ, ಫಿಲಿಪೈನ್ಸ್ ರಾಷ್ಟ್ರೀಯ ರಕ್ಷಣಾ ಇಲಾಖೆಯು ಭಾರತದ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ಗೆ 'ನೋಟಿಸ್ ಆಫ್ ಆರ್ಡರ್' ನೀಡಿತ್ತು. ಭಾರತದಿಂದ ತೀರ-ಆಧಾರಿತ ಹಡಗು ವಿರೋಧಿ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು 374.96 ಮಿಲಿಯನ್ ಡಾಲರ್ ಮೊತ್ತದ (Rs 2,700 ಕೋಟಿ) ಒಪ್ಪಂದವನ್ನು ಅನುಮೋದಿಸಿತು.

            ಆರಂಭಿಕ ಒಪ್ಪಂದದ ಪ್ರಕಾರ, ಫಿಲಿಪೈನ್ಸ್ ಕ್ಷಿಪಣಿ ವ್ಯವಸ್ಥೆಗೆ ಮೂರು ಕ್ಷಿಪಣಿ ಬ್ಯಾಟರಿಗಳನ್ನು ಪಡೆಯುತ್ತದೆ. ಇದು 290 ಕಿಲೋಮೀಟರ್ ವ್ಯಾಪ್ತಿ ಮತ್ತು 2.8 ಮ್ಯಾಕ್ ವೇಗವನ್ನು ಹೊಂದಿದೆ (ಶಬ್ದದ ಮೂರು ಪಟ್ಟು ವೇಗ) ಈ ಒಪ್ಪಂದವು ಆಪರೇಟರ್‌ಗಳಿಗೆ ತರಬೇತಿ ಮತ್ತು ಅಗತ್ಯವಾದ ಸಮಗ್ರ ಲಾಜಿಸ್ಟಿಕ್ಸ್ ಬೆಂಬಲ ಪ್ಯಾಕೇಜ್ ಅನ್ನು ಸಹ ಒಳಗೊಂಡಿದೆ. ಫೆಬ್ರವರಿ 2023 ರಲ್ಲಿ, ಫಿಲಿಪೈನ್ ನೌಕಾಪಡೆಯ 21 ಸಿಬ್ಬಂದಿಗೆ ಕ್ಷಿಪಣಿ ವ್ಯವಸ್ಥೆಗೆ ಆಪರೇಟರ್ ತರಬೇತಿಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.

            ಬ್ರಹ್ಮೋಸ್ ಕ್ಷಿಪಣಿಯನ್ನು ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂಮಿಯಿಂದ ಉಡಾಯಿಸಬಹುದು. ಜನವರಿ 11, 2022 ರಂದು ಭಾರತವು ಸಮುದ್ರದಿಂದ ಸಮುದ್ರಕ್ಕೆ ಚಿಮ್ಮುವ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಈ ಕ್ಷಿಪಣಿಯನ್ನು ಭಾರತೀಯ ನೌಕಾಪಡೆಯ ಹೊಸದಾಗಿ ನಿಯೋಜಿಸಲಾದ INS ವಿಶಾಖಪಟ್ಟಣಂನಿಂದ ಪಶ್ಚಿಮ ಸಮುದ್ರ ತೀರದಲ್ಲಿ ಪರೀಕ್ಷಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries