HEALTH TIPS

ಮಾವಿನಹಣ್ಣು ಸೇವನೆಯಿಂದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆಯೇ..? ಇಲ್ಲಿದೆ ಅಸಲಿ ಸತ್ಯ

 ಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವು ಅದರ ರಸಭರಿತವಾದ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ಬಹುತೇಕ ಎಲ್ಲರಿಗೂ ಮಾವಿನ ಹಣ್ಣು ಫೇವರಿಟ್.‌ ಆದರೆ ಮಾವು ತಿಂದರೆ ದಪ್ಪಗಾಗುತ್ತಾರೆ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಎಂಬ ಆತಂಕದಿಂದ ಅನೇಕರು ಇದನ್ನು ಸೇವನೆ ಮಾಡಲು ಹಿಂಜರಿಯುತ್ತಾರೆ.

ಮಾವಿನಹಣ್ಣಿನ ಬಗ್ಗೆ ಇರುವ ಸಾಮಾನ್ಯ ತಪ್ಪು ಕಲ್ಪನೆಯೆಂದರೆ, ಅವುಗಳು ಹೆಚ್ಚಿನ ಸಕ್ಕರೆಯನ್ನು ಹೊಂದಿರುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹಠಾತ್ತನೆ ಹೆಚ್ಚಿಸುತ್ತವೆ ಎಂಬುದು. ಮಾವಿನಹಣ್ಣುಗಳು ಗ್ಲೂಕೋಸ್ ಮತ್ತು ಫ್ರಕ್ಟೋಸ್ ಅನ್ನು ಒಳಗೊಂಡಿರುವ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತವೆ ಎಂಬುದು ನಿಜ. ಆದರೆ ಅವುಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಅನ್ನು ಹೊಂದಿರುತ್ತವೆ. ಕಡಿಮೆ GI ಹೊಂದಿರುವ ಆಹಾರಗಳು ನಿಧಾನವಾಗಿ ಜೀರ್ಣವಾಗುತ್ತವೆ ಮತ್ತು ಹೀರಲ್ಪಡುತ್ತವೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಕ್ರಮೇಣ ಏರಿಕೆಗೆ ಕಾರಣವಾಗುತ್ತದೆ.

ಸಂಶೋಧನೆಯ ಪ್ರಕಾರ ಮಾವಿನ ಸೇವನೆಯು ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ಅಧಿಕ ತೂಕ ಹೊಂದಿರುವ ವ್ಯಕ್ತಿಗಳ ಮೇಲೆ ಈ ಕುರಿತು ಅಧ್ಯಯನ ನಡೆಸಲಾಗಿದೆ. 12 ವಾರಗಳವರೆಗೆ ಅವರ ಆಹಾರದಲ್ಲಿ ಮಾವಿನಹಣ್ಣನ್ನು ಸೇರಿಸಲಾಯ್ತು. ಈ ವೇಳೆ ಮಾವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿದೆ. ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವವರಿಗೆ ಮಾವಿನಹಣ್ಣು ಸಮತೋಲಿತ ಆಹಾರದ ಭಾಗವಾಗಬಹುದು.

ಮಾವಿನಹಣ್ಣು ತೂಕವನ್ನು ಹೆಚ್ಚಿಸುತ್ತದೆಯೇ?

ಮಾವಿನ ಹಣ್ಣಿನಲ್ಲಿ ಹೆಚ್ಚಿನ ಸಕ್ಕರೆ ಅಂಶವಿರುವುದರಿಂದ ಅದು ತೂಕವನ್ನು ಹೆಚ್ಚಿಸಬಹುದು ಎಂಬುದು ಅನೇಕರ ಭಾವನೆ. ಆದಾಗ್ಯೂ ನೀವು ಕ್ಯಾಲೊರಿ ಸೇವನೆಯ ಬಗ್ಗೆ ಗಮನ ಹರಿಸುತ್ತಿದ್ದರೆ ಮಾವಿನಹಣ್ಣಿನ ಸೇವನೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯ. ಇತರ ಹಣ್ಣುಗಳಿಗೆ ಹೋಲಿಸಿದರೆ ಮಾವಿನಹಣ್ಣುಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಮಧ್ಯಮ ಗಾತ್ರದ ಮಾವು ಸುಮಾರು 150 ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ಪೌಷ್ಟಿಕ ಮತ್ತು ತೃಪ್ತಿಕರ ಉಪಹಾರ ಆಯ್ಕೆಯಾಗಿದೆ.

ಹೆಚ್ಚುವರಿಯಾಗಿ ಮಾವಿನಹಣ್ಣುಗಳಲ್ಲಿ ಫೈಬರ್, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಾವಿನಹಣ್ಣಿನಲ್ಲಿ ಕಂಡುಬರುವ ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ನಮ್ಮ ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆದರೆ ಮಾವಿನ ಹಣ್ಣುಗಳನ್ನು ಮಿತವಾಗಿ ಸೇವನೆ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries