ಮಧೂರು: ಕುಂಬಳೆ ಸೀಮೆಯ ಅತಿ ಪುರಾತನ ಹಾಗೂ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀದೇವರ ಅವಭೃತ ಸ್ನಾನ, ಧ್ವಜಾವರೋಹಣದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ಸಂಪನ್ನಗೊಮಡಿತು.
ಬೆಳಗ್ಗೆ ಕವಾಟೋದ್ಘಾಟನೆ, ಮಧ್ಯಾಹ್ನ ತುಲಾಭಾರ ಸೇವೆ, ತಾಯಂಬಕ, ದೀಪಾರಾಧನೆ, ರಾತ್ರಿ ವಿಶೇಷ ವಿದ್ಯುದ್ದೀಪಾಲಂಕೃತ ಕ್ಷೇತ್ರದ ಕೆರೆಯಲ್ಲಿ ಶ್ರೀದೇವರ ಅವಭೃತ ಸ್ನಾನ,ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಿತು.
ಮಂಗಳವಾರ ಬೆಳಗ್ಗೆ ಉತ್ಸವ ಬಲಿ, ದೀಪೋತ್ಸವ, ದರ್ಶನಬಲಿ, ಸಂಜೆ ತಾಯಂಬಕ, ದೀಪಾರಾಧನೆ, ಉತ್ಸವಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀದೇವರ ಬಲಿ ಘೋಷಯಾತ್ರೆ, ತಾಲೀಮು ಪ್ರದರ್ಶನ, ರಾತ್ರಿ ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ, ಮಧೂರು ಬೆಡಿಕಟ್ಟೆಯಲ್ಲಿ ಸಾಂಪ್ರದಾಯಿಕ ಸುಡುಮದ್ದು ಪ್ರದರ್ಶನ ನಡೆಯಿತು.