ಕಾಸರಗೋಡು: ಆಲ್ ಇಂಡಿಯಾ ಕಾನ್ಫೆಡರೇಶನ್ ಆಫ್ ಎಸ್‍ಸಿ-ಎಸ್‍ಟಿ ಕೇರಳ ಚಾಪ್ಟರ್ ಆಯೋಜಿಸಿದ್ದ ರಾಜ್ಯ ವಿಶೇಷ ಸಮಾವೇಶ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಿತು. ಶಾಸಕ ಎನ್ ಎ ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಎಐಸಿಎಸ್ ಟಿಒ ರಾಜ್ಯಾಧ್ಯಕ್ಷ ಎನ್.ಬಾಬು ನೆಲ್ಲಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸಿ.ಟಿ.ಅಹಮ್ಮದಾಲಿ, ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಆರ್.ರಾಜಶೇಖರ, ಜಿಲ್ಲಾಧ್ಯಕ್ಷ ಎ.ಲಕ್ಷ್ಮಣ ಪೆರಿಯಡ್ಕ, ರಮೇಶ್ ಬಾರಿಕ್ಕಾಡ್, ರಾಮಪ್ಪ ಮಂಜೇಶ್ವರ, ಹರೀಶ್ಚಂದ್ರ, ನಗರ ಸಭೆಯ ಕೌನ್ಸಿಲರ್ ಆರ್.ರೀತಾ, ಎಂ.ಎಂ.ಶಾಜನ್, ಬಾಲನ್ ತ್ರಿತಾಳ, ಎಂ.ಕೆ.ಕುಟ್ಟನ್ ಕೆ.ಸಂತೋಷ್ ಮತ್ತಿತರರು ಮಾತನಾಡಿದರು. ಎಐಸಿಎಸ್ ಟಿಒ ರಾಜ್ಯ ಜಿ, ಕಾರ್ಯದರ್ಶಿ ಪಿ.ವಿ.ನಟೇಶನ್ ಚೇರ್ತಲ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಪೆÇನ್ನಪ್ಪನ್ ಅಮ್ಮಂಗೈ ವಂದಿಸಿದರು. ನಂತರ ವಿಚಾರ ಸಂಕಿರಣ, ಮಹಿಳಾ-ವಿದ್ಯಾರ್ಥಿ-ಯುವ ಸಭೆ ಹಾಗೂ ಸಮಾರೋಪ ಸಮಾರಂಭ ನಡೆಯಿತು.ರಾಜ್ಯ ಉಪಾಧ್ಯಕ್ಷ ವಕೀಲ ರಾಮನ್ ಬಾಲಕೃಷ್ಣನ್ ಕಾರ್ಯಕ್ರಮ ನಿರೂಪಿಸಿದರು.