HEALTH TIPS

ಜಿಲ್ಲಾ ಸಾಕ್ಷರತಾ ಮಿಶನ್ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

              ಕಾಸರಗೋಡು: ಜಿಲ್ಲಾ ಸಾಕ್ಷರತಾ ಮಿಶನ್‍ನ ಆಶ್ರಯದಲ್ಲಿ ಕೇಂದ್ರ ಚುನಾವಣಾ ಆಯೋಗದ ರಚನೆ, ಅಧಿಕಾರ ಮತ್ತು ಕರ್ತವ್ಯಗಳ ಕುರಿತು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಯಿತು.

           ಕೇರಳ 'ಸಂಪೂರ್ಣ ಸಾಕ್ಷರತೆ' ಯನ್ನು ಗಳಿಸಿದ 33ನೇ ವರ್ಷವನ್ನು ಹಲವಾರು ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿರುವುದರ ಅಂಗವಾಗಿ ಕಾಂಞಂಗಾಡ್ ಮಾವುಂಗಲ್ ರಾಮನಗರ ಹೈಯರ್ ಸೆಕೆಂಡರಿ ಶಾಲೆಯಲ್ಲಿ  ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

             ಈ ಸಂದರ್ಭ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿಂದಿನ ಸಾಕ್ಷರತಾ ಕಾರ್ಯಕರ್ತರನ್ನು ಮತ್ತು ಸಮತ್ವ ತರಗತಿಯ ಹಿರಿಯ ಸಾಕ್ಷರತಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮತ್ವ ಸಾಕ್ಷರತೆ  ಕಲಿಯುವವರ  ಕಲಾ ಸಾಂಸ್ಕøತಿಕ ಕಾರ್ಯಕ್ರಮ, 10ನೇ ತರಗತಿಯ ಸಮತ್ವ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ನಡೆಯಿತು. ಸಮತ್ವ ಹೈಯರ್ ಸೆಕೆಂಡರಿ ಕಲಿಯುವವರಿಗಾಗಿ   'ಕೇಂದ್ರ ಚುನಾವಣಾ ಆಯೋಗದ ರಚನೆ, ಅಧಿಕಾರ ಮತ್ತು ಕರ್ತವ್ಯಗಳು' ಎಂಬ ವಿಷಯದ ಬಗ್ಗೆ ಪ್ರಬಂಧ ನೀಡಲಾಗಿತ್ತು. ಭಾರತದ ರಾಷ್ಟ್ರಪತಿಯನ್ನು ಹೇಗೆ ಆಯ್ಕೆ ಮಾಡುವುದು ಮತ್ತು ಅವರ ಅಧಿಕಾರಗಳು ಮತ್ತು ಕರ್ತವ್ಯಗಳು' ಎಂಬುದು 10 ನೇ ತರಗತಿಯ ಸಮತ್ವ ವಿದ್ಯಾರ್ಥಿಗಳಿಗೆ ವಿಷಯವಾಗಿ ನೀಡಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries