ಜೈಸಲ್ಮೇರ್: ವಾಯುಪಡೆಗೆ ಸೇರಿದ, ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತಿದ್ದ ವಿಮಾನವೊಂದು ಜಿಲ್ಲೆಯ ಪಿತಾಲಾ ಗ್ರಾಮದಲ್ಲಿ ಪತನಗೊಂಡಿದೆ.
ತರಬೇತಿ ಹಂತದಲ್ಲಿದ್ದಾಗ ಈ ಅವಘಡ ಸಂಭವಿಸಿದೆ. ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ವಾಯುಪಡೆಯು 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಅಪಘಾತದ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ.