ಕಾಸರಗೋಡು: ಲೋಕಸಭಾ ಚುನಾವಣೆ 2024 ರ ಮೊದಲ ಹಂತದ ತರಬೇತಿಯನ್ನು ಪೆÇೀಲಿಂಗ್ ಅಧಿಕಾರಿಗಳಿಗೆ ನಡೆಸಲಾಯಿತು. ಕಾಞಂಗಾಡ್ ಮತ್ತು ತ್ರಿಕರಿಪುರ ಕ್ಷೇತ್ರಗಳ ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ತರಬೇತಿ ನಿರ್ವಹಣಾ ನೋಡಲ್ ಅಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮ್ಮದ್ ಉದ್ಘಾಟಿಸಿದರು.
ಮತಗಟ್ಟೆಯ ಕಾರ್ಯನಿರ್ವಹಣೆ, ಇವಿಎಂ ಬಳಸಿ ಮತದಾನದ ನಡೆಸುವುದು ಹೇಗೆ ಎಂಬ ಕುರಿತು ತರಬೇತಿ ನೀಡಲಾಯಿತು. ತರಬೇತಿಯು ಐದು ತರಗತಿಗಳಲ್ಲಾಗಿ ನಡೆಯಲಿದೆ. ಪ್ರತಿ ತರಗತಿಗೆ ಮೂವರಂತೆ ಮಾಸ್ಟರ್ ಟ್ರೈನರ್‍ಗಳು ತರಬೇತಿಯನ್ನು ನಡೆಸುತ್ತಿದ್ದಾರೆ. ವಿಧಾನಸಭಾ ಮಟ್ಟದ ಸುಮಾರು 60 ಮಾಸ್ಟರ್ ಟ್ರೈನರ್‍ಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಾಯಕ ನೋಡಲ್ ಅಧಿಕಾರಿ ಕೆ.ಬಾಲಕೃಷ್ಣನ್, ಜಿಲ್ಲಾ ಮಟ್ಟದ ಮೇಲ್ವಿಚಾರಕರಾದ ಟಿ.ವಿ.ಸಜೀವನ್, ಟಿ.ಗೋಪಾಲಕೃಷ್ಣನ್, ಎನ್.ಪಿ.ಸೈನುದ್ದೀನ್, ಸಜೀಂದ್ರನ್ ಪುತ್ತಿಪುರೆಯಿಲ್, ಪಿ.ಸಜಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ತರಬೇತಿಯಲ್ಲಿ 1120 ಮಂದಿ ಭಾಗವಹಿಸಿದ್ದರು.
ಕಾಸರಗೋಡು ಮತ್ತು ಉದುಮ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಮೊದಲ ಹಂತದ ತರಬೇತಿ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆಯಿತು. ಎರಡು ವಿಭಾಗಗಳಲ್ಲಾಗಿ ನಡೆದ ತರಬೇತಿಯಲ್ಲಿ ಸುಮಾರು 1000 ಮಂದಿ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಚುನಾವಣಾ ಪೂರ್ವ ಚಟುವಟಿಕೆಗಳು, ಮತದಾನ ಕೇಂದ್ರದ ಚಟುವಟಿಕೆಗಳು, ಮತದಾನದ ನಂತರದ ಚಟುವಟಿಕೆಗಳು, ಇವಿಎಂಗಳನ್ನು ಬಳಸುವ ವಿಧಾನದ ಬಗ್ಗೆ ತರಬೇತಿ ಮತ್ತು ಮತದಾನದ ಕುರಿತು ತರಬೇತಿ ನೀಡಲಾಯಿತು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮ್ಮದ್ ತರಬೇತಿ ಕಾರ್ಯಕ್ರಮಗಳಿಗೆ ನೀತೃತ್ವ ನೀಡಿದರು. ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ಹಾಗೂ ಸಹಾಯಕ ನೋಡಲ್ ಅಧಿಕಾರಿ ಕೆ.ಬಾಲಕೃಷ್ಣನ್, ಎಚ್.ನಾರಾಯಣ, ಎಲ್.ಕೆ.ಜುಬೇರ್, ಜಿ.ಸುರೇಶ್ ಬಾಬು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. .
ಮಂಜೇಶ್ವರ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ ತರಗತಿಯನ್ನು ಜಿಎಚ್‍ಎಸ್‍ಎಸ್ ಕುಂಬಳೆಯಲ್ಲಿ ಆಯೋಜಿಲಾಗಿದೆ. ಮಂಜೇಶ್ವರ ಸಹಾಯಕ ಚುನಾವಣಾಧಿಕಾರಿಯೂ ಉಪಜಿಲ್ಲಾಧಿಕಾರಿಯೂ ಆದ ಎಲ್.ಆರ್.ಜೆಗ್ಗಿ ಪೌಲ್, ಪಿ.ಶಿಬು, ಇ ಆರ್ ಓ ಹಾಗೂ ಮಂಜೇಶ್ವರ ತಹಸೀಲ್ದಾರ್ ಪಿ ಎ ಮುಹಮ್ಮದ್ ಹಾರಿಸ್, ಹೆಡ್ ಕ್ವಾರ್ಟರ್ಸ್ ಉಪ ತಹಸೀಲ್ದಾರ್ ಕೆ.ಜಿ. ಪ್ರಸಾದ್, ಚುನಾವಣಾ ಉಪ ತಹಸೀಲ್ದಾರ್ ಟಿ.ಎಸ್.ಶ್ರೀಜಿತ್, ಉಪ ತಹಸೀಲ್ದಾರ್ ಪಿ.ಸಜಿತ್ ಕುಮಾರ್ ತರಬೇತಿಯ ನೇತೃತ್ವ ವಹಿಸಿದ್ದರು.
ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ 2024 ಲೋಕಸಭಾ ಚುನಾವಣೆಗೆ ನೇಮಿಸಲಾದ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಎಂಸಿಸಿಯ ನೋಡಲ್ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮ್ಮದ್ ಉದ್ಘಾಟಿಸಿ ಮಾತನಾಡಿದರು.