ಪೆರ್ಲ: ಕಾಸರಗೋಡು ಲೋಕ ಸಭಾ ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಚುನಾವಣಾ ಪ್ರಚಾರ ಪರ್ಯಟನೆಗೆ ಎಣ್ಮಕಜೆ ಪಂಚಾಯತಿಯ ವಿವಿದೆಡೆಗಳಲ್ಲಿ ಉಜ್ವಲ ಸ್ವಾಗತ ನೀಡಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯತಿ ಪಳ್ಳಂನಿಂದ ಆರಂಭಗೊಂಡ ಪ್ರಚಾರ ಪರ್ಯಟನಾ ಸಭೆಯನ್ನು ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಉದ್ಘಾಟಿಸಿದರು.ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್, ಎಐಸಿಸಿ ಕಾರ್ಯದರ್ಶಿ ಐ ಸುಬ್ಬಯ್ಯ ರೈ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್, ಯುಡಿಎಫ್ ಚುನಾವಣಾ ಪಂ. ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯಕ್, ಸಂಚಾಲಕ ಅಬ್ಬುಬ್ಬಕ್ಕರ್ ಪೆರ್ದನೆ, ನೇತಾರರಾದ ಎ.ಕೆ ಶೇರಿಫ್,ಅಸೀಸ್ ಮರಿಕೆ,ಮಂಜುನಾಥ ಆಳ್ವ ಮಡ್ವ ಸಿದ್ಧಿಕ್ ವಳಮೊಗೇರ್ ಮೊದಲಾದವರು ಭಾಗವಹಿಸಿದ್ದರು. ಬಳಿಕ ಬಣ್ಪುತ್ತಡ್ಕ, ಕಜಂಪಾಡಿ, ಕಾಟುಕುಕ್ಕೆ, ಚವರ್ಕಾಡ್, ನಲ್ಕ, ಪೆರ್ಲ ಪೇಟೆ, ಬೇಂಗಪದವು, ಬೆದ್ರಂಪಳ್ಳ ಮೊದಲಾದೆಡೆ ಸ್ವಾಗತ ಸ್ವೀಕರಿಸಿಕೊಂಡು ಶೇಣಿಯಲ್ಲಿ ಪರ್ಯಟನೆ ಸಮಾಪ್ತಿಗೊಂಡಿತು.