ನವದೆಹಲಿ: ಭಾರತದಲ್ಲಿನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮೆರಾನ್ ಅವರನ್ನು ಬ್ರಿಟನ್ ಸರ್ಕಾರ ನೇಮಿಸಿದೆ. ಹಿಂದೆ ಈ ಹುದ್ದೆಯಲ್ಲಿ ಅಲೆಕ್ಸ್ ಎಲ್ಲಿಸ್ ಅವರು ಇದ್ದರು.
ನವದೆಹಲಿ: ಭಾರತದಲ್ಲಿನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮೆರಾನ್ ಅವರನ್ನು ಬ್ರಿಟನ್ ಸರ್ಕಾರ ನೇಮಿಸಿದೆ. ಹಿಂದೆ ಈ ಹುದ್ದೆಯಲ್ಲಿ ಅಲೆಕ್ಸ್ ಎಲ್ಲಿಸ್ ಅವರು ಇದ್ದರು.
'ಲಿಂಡಿ ಕ್ಯಾಮೆರಾನ್ ಅವರನ್ನು ರಿಪಬ್ಲಿಕ್ ಆಫ್ ಇಂಡಿಯಾಗೆ ಬ್ರಿಟಿಷ್ ಹೈ ಕಮಿಷನರ್ ಆಗಿ ನೇಮಿಸಲಾಗಿದೆ.
ಕ್ಯಾಮೆರಾನ್ ಅವರು, ಇದೇ ತಿಂಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ನವದೆಹಲಿಯಲ್ಲಿನ ಬ್ರಿಟನ್ ಹೈಕಮಿಷನ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಯಾಮೆರಾನ್ 2020ರಿಂದ ಯುಕೆ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಯುಕೆನ ಉತ್ತರ ಐರ್ಲೆಂಡ್ ಕಚೇರಿ ಮಹಾನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು.