ಮಂಜೇಶ್ವರ: ವರ್ಕಾಡಿ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವ ಆರಂಭಗೊಂಡಿದ್ದು, ಎ.5 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಇದರಂಗವಾಗಿ ಉಗ್ರಾಣ ಮುಹೂರ್ತ, ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಅವರಿಂದ ದೀಪ ಪ್ರಜ್ವಲನೆ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಕುಣಿತ ಭಜನೆ ಮತ್ತು ಧಾರ್ಮಿಕ ಸಭೆ, ಯಕ್ಷಗಾನ ಬಯಲಾಟ, ಭಜನಾ ಸಂಕೀರ್ತನೆ ನಡೆಯಿತು.
ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ವರ್ಕಾಡಿ ಪಡುಮೂಲೆ ಕುಮಾರಸ್ವಾಮಿ ಕ್ಷೇತ್ರದಿಂದ ಹೊರಟು ಮಜೀರ್ಪಳ್ಳ ಮತ್ತು ಬೇಕರಿ ಜಂಕ್ಷನ್ ಮೂಲಕ ಸಾಗಿ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ, ವರ್ಕಾಡಿ, ಸುಂಕದಕಟ್ಟೆ ಹಾಗು ಮಂದ್ರಬೈಲು ಶ್ರೀ ಕೊರಗಜ್ಜ ಕ್ಷೇತ್ರದಿಂದ ಮುಂದುವರಿದು ಕ್ಷೇತ್ರಕ್ಕೆ ತಲುಪಿತು. ಹಸಿರುವಾಣಿ ಮೆರವಣಿಗೆಯ ಅಂಗವಾಗಿ ಮಜೀರ್ಪಳ್ಳ ಜಂಕ್ಷನ್‍ನಲ್ಲಿ ಕುಣಿತ ಭಜನೆ ಜರಗಿತು.