ಕಾಸರಗೋಡು: ಬೇಕಲ ರೆಸಾರ್ಟ್ ಅಭಿವೃದ್ಧಿ ನಿಗಮ(ಬಿಆರ್‍ಡಿಸಿ)ದ ಮಾಲಿಕತ್ವದಲ್ಲಿ ಪಳ್ಳಿಕ್ಕೆರೆ ಬೇಕಲ ಕೋಟೆ ಬೀಚ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ತೇಲುವ ಸೇತುವೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಬೃಹತ್ ಅಲೆಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಪರಿಗಣಿಸಿ ತೇಲುವ ಸೇತುವೆಯ ಸೇವೆಯನ್ನು ಮಾರ್ಚ್ 31 ರಿಂದ ಮುಂದಿನ ಸೂಚನೆ ಲಭಿಸುವಲ್ಲಿ ವರೆಗೆ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಕ್ಯೆ(0467 2950500)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.