ಕುಂಬಳೆ: ಕಾಸರಗೋಡಿನ ರಂಗ ಚೇತನದ ವತಿಯಿಮದ ಕನ್ನಡ ಶಾಲಾ ವಿದ್ಯಾರ್ಥಿಗಳ ರಂಗ ಕೌಶಲ್ಯಗಳಿಗ ಪ್ರೋತ್ಸಾಹ ನಿಡುವ ನಿಟ್ಟಿನಲ್ಲಿ ಧರ್ಮತ್ತಡ್ಕದ ಶ್ರೀದುರ್ಗಾಪರಮೇಶ್ವರೀ ಪ್ರೌಢ ಶಾಲೆಯಲ್ಲಿ ಅಯೋಜಿಸಲಾದ "ಚಿತ್ತಾರ -2024" ತ್ರಿದಿನ ಸನಿವಾಸ ಶಿಬಿರ ಶುಕ್ರವಾರ ಸಮಾಪ್ತಿಗೊಂಡಿತು.
ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ಶಿಬಿರಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು.ರಂಗ ಚೇತನದ ಅಧ್ಯಕ್ಷ ಬಾಲಕೃಷ್ಣ ಅಡೂರು ಸಭೆಯ ಅಧ್ಯಕ್ಷತೆವಹಿಸಿದ್ದರು. ಶ್ರೀದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್, ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್, ಮಾತೃ ಸಂಘದ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ಗೋಪಾಲ ಮಾಸ್ತರ್ ಕಾಟುಕುಕ್ಕೆ ಮೊದಲಾದವರು ಮಾತನಾಡಿದರು. ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಕಾರ್ಯದರ್ಶಿ ಜಯಪ್ರಸಾದ್ ಪಾಲೆಂಗ್ರಿ, ಜೀವನ್ ಕುಮಾರ್ ಚಿಗುರುಪಾದೆ, ಸಾವಿತ್ರಿ ಟೀಚರ್ ಮೀಯಪದವು, ರಾಮ್ ಮೋಹನ್ ಚಕ್ಕೆ, ಡಿಡಿಇ ನಂದೀಕೇಶನ್, ರಘರಾಮ ಭಟ್, ಚಿಣ್ಣರ ಚಿಲುಮೆಯ ರಾಜೇಶ್ ಮಾಸ್ತರ್ ಕೊಡ್ಲಮೊಗರು ಶಿಬಿರಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ರಂಗಚೇತನದ ಜೊತೆ ಕಾರ್ಯದರ್ಶಿ ಸದಾಶಿವ ಬಾಲಮಿತ್ರ ಸ್ವಾಗತಿಸಿ, ಕಾರ್ಯದರ್ಶಿ ಆಶೋಕ್ ಕೊಡ್ಲಮೊಗರು ವಂದಿಸಿದರು. ದಿವಾಕರ ಬಲ್ಲಾಳ್ ಎ.ಬಿ. ನಿರೂಪಿಸಿದರು.
ಶಿಬಿರಾರ್ಥಿಗಳಿಗೆ ಶಾರೀರಿಕ ಶಿಕ್ಷಕಿ ಸೌಮ್ಯಶ್ರೀ, ಮಕ್ಕಳ ರಂಗತಜ್ಞ ಉದಯ ಸಾರಂಗ್, ಶಶಿ ಕುಳೂರು,ದಿವಾಕರ ಬಲ್ಲಾಳ್, ಚೇವಾರು ವಿನೋದ, ರಾಜು ಕಿದೂರು, ವರದರಾಜು ಬಾಯಾರು, ರಾಜ್ ಕುಮಾರ್ ಕಾಟುಕುಕ್ಕೆ, ವಸಂತ ಮೂಡಂಬೈಲ್, ಸಂಜೀವ ಮರೀಕೆ, ರಾಮ ಮೋಹನ ಸಿ.ಎಚ್, ಗಾಯತ್ರಿ ಕಡಂಬಾರ್, ಪ್ರಕಾಶ್ ಕುಂಬಳೆ, ವಿಜಯ ಕುಮಾರ್ ಪಾವಳ, ಗೋಪಾಲ ಮಾಸ್ತರ್, ಶಿವರಾಮ್ ಕಾಟುಕುಕ್ಕೆ, ಶಿವ ಚೆರುಗೋಳಿ ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ನಡೆಸಿದರು.