ಕಾಸರಗೋಡು: ಎಡನೀರು ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದೊಂದಿಗೆ ಕಳೆದ ಆರು ದಿನಗಳಿಂದ ಎಡನೀರು ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಶಾಲೆಯಲ್ಲಿ ನಡೆಯುತ್ತಿರುವ ಕನ್ನಡ ಸಂಸ್ಕೃತಿ ಶಿಬಿರ 2024 ಇಂದು ಸಮಾರೋಪಗೊಳ್ಳಲಿದೆ.
ಏಪ್ರಿಲ್ 1ರಿಂದ ಆರಂಭಗೊಂಡ ಶಿಬಿರ ವೈವಿಧ್ಯಮಯವಾಗಿ ಅಗ್ರಗಣ್ಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ನಡೆಯುತ್ತಿದ್ದು ಗಮನ ಸೆಳೆದಿದೆ. ಕೊಠಡಿಯೊಳಗಿನ ತರಬೇತಿಗಳು ಮಾತ್ರವಲ್ಲದೆ ವಿಶೇಷ ಅತಿಥಿಗಳು, ಕ್ಷೇತ್ರ ಭೇಟಿಗಳ ಮೂಲಕ ಶಿಬಿರಾರ್ಥಿಗಳ ಆಂತರಂಗಿಕ, ಬೌದ್ಧಿಕ ಬೆಳವಣಿಗೆಗಳಿಗೆ ಪೂರಕವಾಗಿ ಸ್ತುತ್ಯರ್ಹವಾಯಿತು.
ಇಂದು ಅಪರಾಹ್ನ 2 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಉಡುಪಿಯ ಖ್ಯಾತ ಯಕ್ಷಣಿಗಾರ, ಗಿಲಿ-ಗಿಲಿ ಮ್ಯಾಜಿಕ್ ನ ಪ್ರೊ.ಶಂಕರ್ ಹಾಗೂ ಜ್ಯೂನಿಯರ್ ಶಂಕರ್ ಅವರಿಂದ ‘ಅಕ್ಷಯ ವಸಂತ’ ವಿಶೇಷ ಜಾದೂ-ಜಾಗೃತಿ ಕಾರ್ಯಕ್ರಮದ ಮೂಲಕ ಸಮಾರೋಪಗೊಳ್ಳಲಿದೆ ಎಂದು ಭೂಮಿಕಾ ಪ್ರತಿಷ್ಠಾನದ ವಿದುಷಿಃ ಅನುಪಮಾ ಉಡುಪಮೂಲೆ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಚಿತ್ರ ಮಾಹಿತಿ: ಶಿಬಿರಾರ್ಥಿಗಳು ಇತ್ತೀಚೆಗೆ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರ ಮನೆಗೆ ಸಂದರ್ಶಿಸಿದ ಕ್ಷಣ)