ನವದೆಹಲಿ: ಐಫೋನ್ ಸೇರಿದಂತೆ ಆಯಪಲ್‌ನ ಸಾಧನಗಳನ್ನು ಬಳಸುವವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡದ (ಸಿಇಆರ್ಟಿ-ಇನ್) ಭದ್ರತಾ ಸಲಹೆಯು, ಐ ಫೋನ್, ಐಪ್ಯಾಡ್, ಮ್ಯಾಕ್‌ಬುಕ್ ಮತ್ತು ವಿಷನ್ ಪ್ರೋ ಬಳಕೆ 'ಹೈ ರಿಸ್ಕ್'ನಿಂದ ಕೂಡಿದೆ ಎಂದು ಎಚ್ಚರಿಕೆ ನೀಡಿದೆ.
ವಿವಿಧ ಆಪಲ್ ಸಾಧನಗಳಲ್ಲಿ 'ರಿಮೋಟ್ ಕೋಡ್ ಎಕ್ಸಿಕ್ಯೂಷನ್ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಎಚ್ಚರಿಕೆ ನೀಡಲಾಗಿದೆ. ಆಪಲ್ ಸಫಾರಿ ಆವೃತ್ತಿಗಳು 1.4.2017 ಕ್ಕಿಂತ ಹಿಂದಿನ ಆವೃತ್ತಿಗಳು, ಆಪಲ್ ಮ್ಯಾಕ್ಓಎಸ್, ವೆಂಚುರಾ ಆವೃತ್ತಿಗಳು 6.6.2013 ಕ್ಕಿಂತ ಹಿಂದಿನವು, ಆಪಲ್ ಮ್ಯಾಕ್ ಓಎಸ್ ಸನೋಮಾ ಆವೃತ್ತಿಗಳು 1.4.2014 ಕ್ಕಿಂತ ಹಿಂದಿನವು, ಆಪಲ್ ವಿಷನ್ ಓಎಸ್ ಆವೃತ್ತಿಗಳು 1.1.2001 ಗಿಂತ ಹಿಂದಿನವು, ಆಪಲ್ ಐಓಎಸ್-ಐಪಾಡ್ ಓಎಸ್ ಆವೃತ್ತಿಗಳು 1.4.2017 ಕ್ಕಿಂತ ಹಿಂದಿನವು, ಮತ್ತು 7.7.2016 ಕ್ಕಿಂತ ಹಿಂದಿನ ಆಪಲ್ ಐಒಎಸ್ ಮತ್ತು ಐ ಪಾಡ್ ಓಎಸ್ ಆವೃತ್ತಿಗಳನ್ನು ಒಳಗೊಂಡಂತೆ ಆಪಲ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ದುರ್ಬಲಗೊಂಡಿದ್ದು, ಹೈ ರಿಸ್ಕ್ನಿಂದ ಕೂಡಿವೆ ಎಂದು ಎಚ್ಚರಿಸಲಾಗಿದೆ.
ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಹೊಸ ಆವೃತ್ತಿಗಳಿಗೆ ಅಪ್‌ಡೇಟ್ ಮಾಡದ ಹೊರತು ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ. ಮ್ಯಾಕ್‌ಬುಕ್ ಬಳಕೆದಾರರು ತಮ್ಮ ಸಿಸ್ಟಂಗಳನ್ನು ಕೂಡಲೇ ನವೀಕರಿಸಬೇಕು. ವಿಶ್ವಾಸಾರ್ಹ ಪ್ಲಾಟ್‌ಫಾರ್ಮ್‌ಗಳು, ನಿಯಮಿತ ಬ್ಯಾಕಪ್‌ಗಳು, ಟೂ-ಲೇಯರ್ಸ್ ಭದ್ರತಾ ಸೆಟ್ಟಿಂಗ್‌ಗಳು ಇತ್ಯಾದಿಗಳಿಂದ ಡೌನ್‌ಲೋಡ್ ಮಾಡುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಈ ಎಚ್ಚರಿಕೆ ನೀಡಲಾಗಿದೆ.