ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆಯೊಂದರ ಕಟ್ಟಡದ ಲಿಫ್ಟ್‍ನ ಹೊಂಡಕ್ಕೆ ಬಿದ್ದು ನಿರ್ಮಾಣ ಕಾರ್ಮಿಕ ಒಡಿಸ್ಸಾ ಚಂಬಾಡಿಪುರ ನಿವಾಸಿ ದೇವೇಂದ್ರಶ್ರೀ (33) ಸಾವಿಗೀಡಾದರು.
ಚೆಂಗಳದ ಇಂದಿರಾನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆಯೊಂದರಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ಅದರ ಲಿಫ್ಟ್‍ನ ಹೊಂಡಕ್ಕೆ ನಿಯಂತ್ರಣ ತಪ್ಪಿ ದೇವೇಂದ್ರಶ್ರೀ ಬಿದ್ದಿದ್ದರು. ತಲೆಗೆ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ವಿದ್ಯಾನಗರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.