ಶ್ರಿನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಿದ ಭಾರತೀಯ ಸೇನೆ ಭಯೋತ್ಪಾದಕನನ್ನು ಹತ್ಯೆ ಮಾಡಿದೆ.
ಬಾರಾಮುಲ್ಲಾ: ಗಡಿಯಲ್ಲಿ ಒಳನುಸುಳುವ ಸಂಚು ವಿಫಲಗೊಳಿಸಿದ ಸೇನೆ- ಭಯೋತ್ಪಾದಕನ ಹತ್ಯೆ
0
ಏಪ್ರಿಲ್ 05, 2024
Tags
ಶ್ರಿನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಿದ ಭಾರತೀಯ ಸೇನೆ ಭಯೋತ್ಪಾದಕನನ್ನು ಹತ್ಯೆ ಮಾಡಿದೆ.
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಶುಕ್ರವಾರ ಬೆಳಿಗ್ಗೆ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉರಿ ಪ್ರದೇಶದ ಸಬುರಾ ನಾಲಾ ರುಸ್ತಮ್‌ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಯೋತ್ಪಾದಕರ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ್ದ ಸೇನೆಯ ಅಧಿಕಾರಿಗಳು, ಗಡಿ ದಾಟಿ ಒಳನುಸುಳದಂತೆ ತಡೆದಿದ್ದಾರೆ. ಈ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಸೇನೆ ಪ್ರತಿದಾಳಿ ನಡೆಸಿದೆ. ಪರಿಣಾಮ ಒಬ್ಬ ಭಯೋತ್ಪಾದಕ ಸಾವಿಗೀಡಾಗಿದ್ದಾನೆ.
ಸದ್ಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.