ಕಾಸರಗೋಡು: ಅಜಾನೂರು ಗ್ರಾಮ ಪಂಚಾಯಿತಿ ಹಾಗೂ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ನಡೆಯುತ್ತಿರುವ ಲೋಪಗಳ ಬಗ್ಗೆ ಎನ್‍ಫೋರ್ಸ್‍ಮೆಂಟ್ ಸ್ಕ್ವೇಡ್ ವವ್ಯಾಪಕ ಕಾರ್ಯಾಚರಣೆ ನಡೆಸಲಾಯಿತು. ದ್ರವ ತ್ಯಾಜ್ಯದ ಅಸಮರ್ಪಕ ನಿರ್ವಹಣೆಗಾಗಿ ಮಾವುಂಗಲ್ ಖಾಸಗಿ ಆಸ್ಪತ್ರೆಗೆ ಮತ್ತು ಘನತ್ಯಾಜ್ಯಗಳ ನಿರ್ಲಕ್ಷ್ಯದ ನಿರ್ವಹಣೆಗಾಗಿ ಹಾರ್ಡ್‍ವೇರ್ ಸಮಸ್ಥೆಗೆ ತಲಾ 10000 ರೂ.ದಂಡ ವಿಧಿಸಲಾಯಿತು. ಘನತ್ಯಾಜ್ಯ ನಿರ್ವಹಣೆಯಲ್ಲಿ ಅಕ್ರಮ ಎಸಗಿರುವ ಕಾಸರಗೋಡು ತಳಂಗರೆ, ತೆರುವತ್ ಪ್ರದೇಶದ ಕ್ವಾರ್ಟರ್ಸ್‍ಗಳಿಗೆ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ತಲಾ 5000 ರೂ.ದಂಡ ವಿಧಿಸಲಾಯಿತು.
ತಪಾಸಣೆಯಲ್ಲಿ ಜಾರಿ ದಳದ ಅಧಿಕಾರಿ ಮೊಹಮ್ಮದ್ ಮದನಿ, ಆರೋಗ್ಯ ನಿರೀಕ್ಷಕರಾದ ಆಶಾ ಮೇರಿ, ಅಮಿಷಾ ಹಾಗೂ ಸ್ಕ್ವಾಡ್ ಸದಸ್ಯರಾದ ಫಾಝಿಲ್ ಇ.ಕೆ ಮತ್ತು ಸನಲ್ ಎಂ ಭಾಗವಹಿಸಿದ್ದರು.