ಜಶಪುರ: ಛತ್ತೀಸಗಢದ ಜಶಪುರ ಜಿಲ್ಲೆಯಲ್ಲಿ ಅಕ್ಕ-ತಂಗಿ ಸೇರಿದಂತೆ ಮೂವರು ಬಾಲಕಿಯರನ್ನು ಅಪಹರಿಸಿದ ದುಷ್ಕರ್ಮಿಗಳು, ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜಶಪುರ: ಛತ್ತೀಸಗಢದ ಜಶಪುರ ಜಿಲ್ಲೆಯಲ್ಲಿ ಅಕ್ಕ-ತಂಗಿ ಸೇರಿದಂತೆ ಮೂವರು ಬಾಲಕಿಯರನ್ನು ಅಪಹರಿಸಿದ ದುಷ್ಕರ್ಮಿಗಳು, ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಈ ದುರ್ಘಟನೆ ನಡೆದ ನಂತರ ಬಾಲಕಿಯೊಬ್ಬಳು ತನ್ನ 17 ವರ್ಷದ ಸ್ನೇಹಿತನಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಳು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
'ಅತ್ಯಾಚಾರ ಎಸಗಿದವರಲ್ಲಿ ಸಂತ್ರಸ್ತೆಯ ಸ್ನೇಹಿತನೂ ಇದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ಜೊತೆ ಸಂಘರ್ಷಕ್ಕೀಡಾದ ಇಬ್ಬರು ಬಾಲಕರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ' ಎಂದು ಪತ್ಥಲಗಾಂವ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಧ್ರುವೇಶ್ ಕುಮಾರ್ ಜೈಸ್ವಾಲ್ ತಿಳಿಸಿದ್ದಾರೆ.
'ಬಾಲಕಿಯರನ್ನು ಸೋಮವಾರ ಅಪಹರಿಸಿದ ಮೂವರು ಕಾರಿನಲ್ಲಿ ನೆರೆಯ ಸುರ್ಗುಜಾ ಜಿಲ್ಲೆಯ ಪ್ರವಾಸಿ ತಾಣವಾದ ಮೈನ್‌ಪಾಟಗೆ ಕರೆದೊಯ್ದಿದ್ದಾರೆ. ಅಲ್ಲಿ ಆಲ್ಕೋಹಾಲ್ ಬೆರೆಸಿದ ತಂಪು ಪಾನೀಯ ಸೇವಿಸುವಂತೆ ಮಾಡಿ ಅವರ ಪ್ರಜ್ಞೆ ತಪ್ಪಿಸಿದ್ದು, ಕಾಡಿನಲ್ಲಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಪತ್ಥಲಗಾಂವ್ ಬಸ್ ನಿಲ್ದಾಣದಲ್ಲಿ ಇಳಿಸಿ ಪರಾರಿಯಾಗಿದ್ದಾರೆ' ಎಂದು ಅವರು ಹೇಳಿದ್ದಾರೆ.