ಕಾಸರಗೋಡು: ಎನ್‍ಡಿಎ ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಣಾಳಿಕೆಯನ್ನು ಏಪ್ರಿಲ್ 4 ರಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಬಿಡುಗಡೆಗೊಳಿಸುವರು. ಅಂದು ಸಂಜೆ 4.30ಕ್ಕೆ ಕಾಞಂಗಾಡ್ ಕೋಟಚ್ಚೇರಿಯಲ್ಲಿ ನಡೆಯಲಿರುವ ಎನ್‍ಡಿಎ ಸಮಾವೇಶದಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಲಾಗುವುದು. ಸಭೆಯಲ್ಲಿ ಎನ್‍ಡಿಎ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.