ಕಾಸರಗೋಡು: ಭೂಮಿಯ ದಾಖಲುಪತ್ರ ಸರಿಪಡಿಸಿ ನೀಡಲು ಲಂಚ ಸ್ವೀಕರಿಸಿದ ಕಂದಾಯ ಇಲಾಖೆಯ ನೌಕರನನ್ನು ವಿಜಿಲೆನ್ಸ್ ಅದಿಕಾರಿಗಳ ತಂಡ ಬಂಧಿಸಿದೆ. ಅಡೂರು ಗ್ರಾಮಾಧಿಕಾರಿ ಕಚೇರಿಯಫೀಲ್ಡ್ ಅಸಿಸ್ಟೆಂಟ್, ಕಾರಡ್ಕ ಸನಿಹದ ಕರ್ಮಂತೋಡಿ ನಿವಾಸಿ ಕೆ. ನಾರಾಯಣ(47)ಬಂಧಿತ.
ದೂರುದಾತನಿಂದ ಪಡೆದು, ತನ್ನ ಕಾರಿನಲ್ಲಿರಿಸಿದ್ದ 20ಸಾವಿರ ರಊ. ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆದೂರು ಆಲಂತಡ್ಕ ನಿವಾಸಿ ರಮೇಶನ್ ಎಂಬವರು ಅಡೂರಿನಲ್ಲಿರುವ ತನ್ನ ತರವಾಡು ಮನೆ ಹಾಗೂ ಕುಟುಂಬ ಕ್ಷೇತ್ರದಲ್ಲಿನ ಜಾಗಕ್ಕೆ ಸಂಬಂಧಿಸಿದ ದಾಖಲೆ ಸರಿಪಡಿಸಿಕೊಡಲು 20ಸಾವಿರ ರಊ. ಲಂಚಕ್ಕೆ ಬೇಡಿಕೆಯಿರಿಸಿದ್ದು, ಈ ಹಣ ಪಡೆಯುತ್ತಿದ್ದಂತೆ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಬಂಧಿತನನ್ನು ತಲಶ್ಯೇರಿ ವಿಜಿಲೆನ್ಸ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.