ಬದಿಯಡ್ಕ: ಕಾನತ್ತಿಲ ಶ್ರೀ ಧೂಮಾವತೀ ದೈವಸ್ಥಾನ ನವೀಕರಣ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀಧೂಮಾವತೀ ದೈವದ ನೇಮ ಗುರುವಾರ ಹಾಗೂ ಶುಕ್ರವಾರಗಳಂದು ಜರಗಿತು. ಬ್ರಹ್ಮಶ್ರೀ ವೇದಮೂರ್ತಿ ಕಿಳಿಂಗಾರು ಶಿವರಾಮ ಭಟ್ ಪೆರಡಾಲ ಇವರ ಆಚಾರ್ಯತ್ವದಲ್ಲಿ ಪ್ರತಿಷ್ಠಾ ಕಾರ್ಯ, ಕಲಶಾಭಿಷೇಕ ಜರಗಿತು. ಗುರುವಾರ ರಾತ್ರಿ ಶ್ರೀ ದುರ್ಗಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ದೈವದ ತೊಡಂಗಲ್, ಅನ್ನಸಂತರ್ಪಣೆ ಜರಗಿತು. ಶುಕ್ರವಾರ ಬೆಳಗ್ಗೆ ಶ್ರೀಧೂಮಾವತೀ ದೈವದ ನೃತ್ಯ, ಅರಸಿನ ಹುಡಿ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಊರಪರವೂರ ಅನೇಕ ಮಂದಿ ಭಗವದ್ಭಕ್ತರು, ಕೂಟುಕಟ್ಟಿನ ಸದಸ್ಯರು ಪಾಲ್ಗೊಂಡಿದ್ದರು.