HEALTH TIPS

ಡ್ಯಾಶ್ ಬೋರ್ಡ್ ಮೇಲೆ ತಮ್ಮ ಕುಟುಂಬದ ಫೋಟೊ ಇಟ್ಟುಕೊಳ್ಳುವಂತೆ ಉತ್ತರ ಪ್ರದೇಶ ಬಸ್ ಚಾಲಕರಿಗೆ ಸೂಚನೆ

 ಕ್ನೊ: ರಸ್ತೆ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲು ಉತ್ತರ ಪ್ರದೇಶ ಸಾರಿಗೆ ಇಲಾಖೆಯು ಹೊಸ ಕಾರ್ಯತಂತ್ರವೊಂದನ್ನು ರೂಪಿಸಿದೆ.

ವಾಣಿಜ್ಯ ವಾಹನಗಳು ಹಾಗೂ ರಾಜ್ಯ ಸಾರಿಗೆ ಬಸ್ ಗಳ ಚಾಲಕರು ತಮ್ಮ ಕುಟುಂಬದ ಫೋಟೊವನ್ನು ಡ್ಯಾಶ್ ಬೋರ್ಡ್ ಮೇಲೆ ಇರಿಸಿಕೊಳ್ಳುವಂತೆ ರಾಜ್ಯ ಸಾರಿಗೆ ಆಯುಕ್ತ ಚಂದ್ರ ಭೂಷಣ್ ಸಿಂಗ್ ಮನವಿ ಮಾಡಿದ್ದಾರೆ.

ಈ ಕುರಿತು ಬುಧವಾರ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ವೆಂಕಟೇಶ್ವರುಲು, ಚಾಲಕರು ತಮ್ಮ ಕುಟುಂಬದ ಫೋಟೊಗಳನ್ನು ಪ್ರದರ್ಶಿಸುವ ಉಪಾಯವನ್ನು ಆಂಧ್ರಪ್ರದೇಶದಿಂದ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಚಾಲಕರು ತಮ್ಮ ಮುಂದೆ ತಮ್ಮ ಕುಟುಂಬದ ಫೋಟೊ ಪ್ರದರ್ಶಿಸುವಂತೆ ಮಾಡುವ ಈ ವಿನೂತನ ಉಪಾಯವು ಚಾಲಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಭಾವನಾತ್ಮಕ ಸಂವೇದನೆಯನ್ನು ರೂಪಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

"ನಾನು ಚಾಲಕರಿಗೆ ಅವರ ಕುಟುಂಬದ ಕುರಿತು ನೆನಪಿಸುತ್ತಲೇ ಇರುತ್ತೇನೆ ಹಾಗೂ ಅವರಲ್ಲಿ ಸುರಕ್ಷಿತ ಚಾಲನೆಯನ್ನು ಉತ್ತೇಜಿಸುತ್ತೇನೆ" ಎಂದೂ ವೆಂಕಟೇಶ್ವರುಲು ಹೇಳಿದ್ದಾರೆ.

ಸಾರಿಗೆ ಆಯುಕ್ತರ ಪ್ರಕಾರ, ಈ ಕ್ರಮದಿಂದ ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿ ರಸ್ತೆ ಅಪಘಾತ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ಹೇಳಲಾಗಿದೆ.

ಈ ಕುರಿತು ಬಿಡುಗಡೆಯಾಗಿರುವ ಪತ್ರಿಕಾ ಪ್ರಕಟಣೆಯಲ್ಲಿ 2023ರಲ್ಲಿ ಶೇ. 4.7ರಷ್ಟು ರಸ್ತೆ ಅಪಘಾತಗಳು ಏರಿಕೆಯಾಗಿದ್ದು, 2022ರಲ್ಲಿ 22,596 ಇದ್ದ ಈ ಪ್ರಮಾಣವು 2023ರಲ್ಲಿ 23,652ಕ್ಕೆ ಏರಿಕೆಯಾಗಿದೆ. ಹೀಗಾಗಿ ಸಾರಿಗೆ ಇಲಾಖೆಯು ಇಂತಹ ವಿನೂತನ ಕ್ರಮದ ಮೊರೆ ಹೋಗಿದೆ ಎಂದು ಹೇಳಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries