ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ, ಉಪಸಂಘ ಚಿತ್ತಾರಿ ಇದರ ಆಶ್ರಯದಲ್ಲಿ ಆಯೋಜಿಸಿದ `ಯುಗಾದಿ ಸಂಭ್ರಮ'ದಂಗವಾಗಿ `ಕ್ಷತ್ರಿಯ ಟ್ರೋಫಿ' ಕ್ರಿಕೆಟ್ ಪಂದ್ಯಾಟ ಮಲ್ಲಿಗೆಮಾಡಿನಲ್ಲಿ ನಡೆಯಿತು.
ವಸಂತಿ ಪದ್ಮನಾಭ ಮಲ್ಲಿಗೆಮಾಡು ಅವರು ದೀಪ ಪ್ರಜ್ವಲಗೈದು ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿದರು. ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಪತ್ರಕರ್ತ ಪ್ರದೀಪ್ ಬೇಕಲ್, ಹೊಸದುರ್ಗ ನಗರಸಭಾ ಮಾಜಿ ಕೌನ್ಸಿಲರ್ ಸುಕನ್ಯಾ ಕಾಂಞಂಗಾಡ್, ರೋಶನ್ ಮಲ್ಲಿಗೆಮಾಡು, ರೇಖಾ ರೋಶನ್, ಪ್ರದೀಪ್ ಬಾರಿಕ್ಕಾಡು, ಲೋಕೇಶ್ ಅಣಂಗೂರು, ಉಷಾ ಟೀಚರ್, ಉಪಸಂಘದ ಗೌರವಾಧ್ಯಕ್ಷ ಹರೀಶ್ ಸಿ.ಪಿ.ಮಲ್ಲಿಗೆಮಾಡು, ಅಧ್ಯಕ್ಷ ಗಣೇಶ್ ಬಿ.ಮಲ್ಲಿಗೆಮಾಡು, ಉಪಾಧ್ಯಕ್ಷ ಗಿರೀಶ್ ಪಿ.ಎಂ.ಬಾರಿಕ್ಕಾಡು, ಕಾರ್ಯದರ್ಶಿ ಸಂಪತ್ ಕೋಟೆಮನೆ, ಜೊತೆ ಕಾರ್ಯದರ್ಶಿಗಳಾದ ದೀಪಕ್ ಕಲ್ಲಿಂಗಾಲ್, ಅನೀಶ್ ಮಲ್ಲಿಗೆಮಾಡು, ಕೋಶಾಧಿಕಾರಿ ಶಿವರಾಜ್ ಮಲ್ಲಿಗೆಮಾಡು, ಲೆಕ್ಕಪರಿಶೋಧಕ ಪವನ್ ಬಿ.ಬಾರಿಕ್ಕಾಡು, ಕ್ರೀಡಾ ಕಾರ್ಯದರ್ಶಿ ಶ್ರೀಜಿತ್ ಮಲ್ಲಿಗೆಮಾಡು, ಜೊತೆ ಕ್ರೀಡಾ ಕಾರ್ಯದರ್ಶಿ ರಾಕೇಶ್ ಮಲ್ಲಿಗೆಮಾಡು, ಸಾಂಸ್ಕøತಿಕ ಸಂಚಾಲಕ ಚಂದ್ರಕಾಂತ ನಾಯಕರ ಹಿತ್ತಿಲು ಮೊದಲಾದವರು ಉಪಸ್ಥಿತರಿದ್ದರು. ಶ್ರೀಲಕ್ಷಿ, ಸಾತ್ವಿಕಾ ಪ್ರಾರ್ಥನೆಗೈದರು.
ಕ್ರಿಕೆಟ್ ಪಂದ್ಯಾಟದಲ್ಲಿ 8 ತಂಡಗಳು ಭಾಗವಹಿಸಿದ್ದು, ಆರ್‍ಆರ್‍ಕೆÀಕೆಎಸ್‍ಎಸ್ ಯುವ ಸಂಘ ಕಾಸರಗೋಡು ಪ್ರಥಮ ಬಹುಮಾನ ಗೆದ್ದುಕೊಂಡಿತು. ಉದಯಗಿರಿ ತಂಡ ದ್ವಿತೀಯ ಬಹುಮಾನ ಪಡೆಯಿತು.