ಅಗರ್ತಲಾ: ಗ್ರಾಮದ ರಸ್ತೆ 7 ಕಿ.ಮೀ ಹದಗೆಟ್ಟಿರುವುದರಿಂದ ತ್ರಿಪುರಾದ ಧಲಾಯ್ ಜಿಲ್ಲೆಯ ಗ್ರಾಮವೊಂದರ ಬುಡಕಟ್ಟು ಜನಾಂಗಕ್ಕೆ ಸೇರಿದ 600ಕ್ಕೂ ಹೆಚ್ಚು ಮಂದಿ ಮತದಾನ ಬಹಿಷ್ಕಾರ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗರ್ತಲಾ: ಗ್ರಾಮದ ರಸ್ತೆ 7 ಕಿ.ಮೀ ಹದಗೆಟ್ಟಿರುವುದರಿಂದ ತ್ರಿಪುರಾದ ಧಲಾಯ್ ಜಿಲ್ಲೆಯ ಗ್ರಾಮವೊಂದರ ಬುಡಕಟ್ಟು ಜನಾಂಗಕ್ಕೆ ಸೇರಿದ 600ಕ್ಕೂ ಹೆಚ್ಚು ಮಂದಿ ಮತದಾನ ಬಹಿಷ್ಕಾರ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಗ್ರಾಮಲ್ಲಿ ಸುಮಾರು 900 ಮಂದಿ ಇದ್ದು, ರಸ್ತೆ ರಿಪೇರಿ ಮಾಡಬೇಕು ಎಂದು ಹಲವು ತಿಂಗಳಿನಿಂದ ಬೇಡಿಕೆ ಇರಿಸಿದ್ದರು.
ಗ್ರಾಮಸ್ಥರು ಮತಗಟ್ಟೆಯ ಹೊರಗೆ ಗುಂಪು ಸೇರಿದ್ದಾರೆ. ಆದರೆ ಯಾರೊಬ್ಬರು ಮತ ಚಲಾಯಿಸಲು ಮುಂದಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗ್ರಾಮಸ್ಥರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಡಳಿತವು ಅವರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಿದೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆಯೂ ಗ್ರಾಮಸ್ಥರು ದೂರು ನೀಡಿದ್ದಾರೆ ಎಂದು ಗಂದಚೆರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆರಿಂದಮ್ ದಾಸ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಅಧಿಕಾರಿಗಳ ತಂಡ ಗ್ರಾಮಕ್ಕೆ ಧಾವಿಸಿ ಅವರನ್ನು ಮನವೊಲಿಸುವ ಕೆಲಸ ಮಾಡಿದೆ.