ಭುವನೇಶ್ವರ: ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಜುನ್‌ಪುಟ್ ಗ್ರಾಮದಲ್ಲಿ ಶಸ್ತ್ರಾಸ್ತ್ರಗಳ ಲಘು ಪರೀಕ್ಷಾ ಕೇಂದ್ರ ಸ್ಥಾಪನೆಯ ಕಾರ್ಯಕ್ಕೆ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಚಾಲನೆ ನೀಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ರಾಜಧಾನಿ ಕೋಲ್ಕತ್ತದಿಂದ 177 ಕಿ.ಮೀ. ದೂರದಲ್ಲಿರುವ ಜುನ್‌ಪುಟ್ ಗ್ರಾಮವು, ಬಂಗಾಳ ಕೊಲ್ಲಿ ತೀರದ ಸಮೀಪವಿದ್ದು, ಪರೀಕ್ಷೆ ನಡೆಸಲು ಸೂಕ್ತ ಸ್ಥಳವಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಸಕಾಲದಲ್ಲಿ ನೆರವೇರಿಸುವುದು ಮುಖ್ಯ. ಈಗಾಗಲೇ, ಒಡಿಶಾದ ಬಾಲೇಶ್ವರ ಬಳಿಯ ಚಾಂಡಿಪುರದಲ್ಲಿ ಸಮಗ್ರ ಪರೀಕ್ಷಾ ವಲಯ (ಐಟಿಆರ್) ಇದ್ದು, ಹೆಚ್ಚುವರಿಯಾಗಿ ಜೂನ್ಪುತದಲ್ಲಿ ಪರೀಕ್ಷಾ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
'ಒಟ್ಟು 8.73 ಎಕರೆ ಪ್ರದೇಶದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ಈ ಪ್ರದೇಶವು ಸುರಕ್ಷತೆಗೆ ಅಗತ್ಯವಿರುವ ಎಲ್ಲ ಮಾನದಂಡಗಳನ್ನು ಪೂರೈಸುತ್ತದೆ' ಎಂದಿದ್ದಾರೆ.