ಧರ್ಮಶಾಲಾ: ನಟಿ ಮತ್ತು ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಟಿಬೆಟಿಯನ್ ಬೌದ್ಧ ಧರ್ಮಗುರು ದಲೈ ಲಾಮಾ ಅವರನ್ನು ಇಂದು (ಸೋಮವಾರ) ಭೇಟಿಯಾಗಿದ್ದಾರೆ.
ಧರ್ಮಶಾಲಾ: ನಟಿ ಮತ್ತು ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಟಿಬೆಟಿಯನ್ ಬೌದ್ಧ ಧರ್ಮಗುರು ದಲೈ ಲಾಮಾ ಅವರನ್ನು ಇಂದು (ಸೋಮವಾರ) ಭೇಟಿಯಾಗಿದ್ದಾರೆ.
ಈ ವೇಳೆ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಜೈ ರಾಮ್ ಠಾಕೂರ್ ಕೂಡ ಅವರ ಜೊತೆಗಿದ್ದರು.
'ದಲೈ ಲಾಮಾ ಅವರನ್ನು ಭೇಟಿಯಾಗಿರುವುದು ಒಂದು ಅದ್ಭುತ ಅನುಭವವಾಗಿದೆ. ಇದು ನನ್ನ ಜೀವನದುದ್ದಕ್ಕೂ ನೆನಪಿನಲ್ಲಿಡುವಂತಹ ಅನುಭವವಾಗಿದೆ' ಎಂದು ಕಂಗನಾ ಹೇಳಿದ್ದಾರೆ.
ದಲೈ ಲಾಮಾ ಅವರ ಭೇಟಿ ನಂತರ ಚಂಬಾ ಜಿಲ್ಲೆಯ ಭರ್ಮೂರ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ ಕಂಗನಾ ಚುನಾವಣಾ ಪ್ರಚಾರವನ್ನು ಮುಂದುವರಿಸಿದರು.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಂಗನಾ ರನೌತ್ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಕಾಂಗ್ರೆಸ್‌ನಿಂದ ವಿಕ್ರಮಾದಿತ್ಯ ಸಿಂಗ್ ಕಣದಲ್ಲಿದ್ದು, ಕಂಗನಾಗೆ ಪೈಪೋಟಿ ನೀಡಲಿದ್ದಾರೆ.