ಕಾಸರಗೋಡು: ಲೋಕಸಭಾ ಚುನಾವಣೆಯ ಮತ ಎಣಿಕಾ ಕೇಂದ್ರ ಹಾಗು ಏಳು ವಿಧಾನಸಭಾ ಕ್ಷೇತ್ರಗಳ ಸ್ಟ್ರಾಂಗ್ ರೂಮ್‍ಗಳ ಸಜ್ಜೀಕರಣ ವ್ಯವಸ್ಥೆ ಅವಲೋಕನ ನಡೆಸುವ ನಿಟ್ಟಿನಲ್ಲಿ ಪೆರಿಯಾ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಚುನಾವಣಾ ಆಯೋಗದ ಜನರಲ್ ಒಬ್ಸರ್ವರ್ ರಿಶಿರೇಂದ್ರ ಕುಮಾರ್ ಭೇಟಿ ನೀಡಿದರು.
ವಿಶ್ವ ವಿದ್ಯಾಳಯದ ಕಾವೇರಿ, ಗಂಗೋತ್ರಿ ಮತ್ತು ಬ್ರಹ್ಮಪುತ್ರ ಬ್ಲಾಕ್‍ಗಳನ್ನು ಸಂದರ್ಶಿಸಿ, ಅಲ್ಲಿನ ಭದ್ರತಾ ವ್ಯವಸ್ಥೆ ಹಾಗೂ ಇತರ ಸಜ್ಜೀಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾಸರಗೋಡು ಜಿಲ್ಲೆಯ ಲೋಕಸಭಾ ಚುನಾವಣೆಯ ಸಿದ್ಧತೆಗಳ ಮೇಲ್ವಿಚಾರಣೆ ನಡೆಸುವ ಅಂಗವಾಗಿ ಭೇಟಿ ಆಯೋಜಿಸಲಾಗಿತ್ತು. ಸಾರ್ವತ್ರಿಕ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ದಾಸ್ತಾನಿರಿಸಿರುವ ಸ್ಟ್ರಾಂಗ್ ರೂಂ ವ್ಯವಸ್ಥೆಯನ್ನು ಅವರು ಪರಿಶೀಲಿಸಿದರು. ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಪಿ.ಅಖಿಲ್, ಕಾಸರಗೋಡು ತಹಸೀಲ್ದಾರ್ ಪಿ.ಅಬೂಬಕ್ಕರ್ ಸಿದ್ದಿಕ್, ಸಂಪರ್ಕಾಧಿಕಾರಿ ನಿಖಿಲ್ ನಾರಾಯಣನ್ ಹಾಗೂ ತಾಲೂಕು ಚುನಾವಣಾ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.