HEALTH TIPS

ಜಾಗ್ರತೆ: ಪೋಲೀಸ್ ಕಣ್ಗಾವಲು ಹಿಂದಿದೆ: ವಾಟ್ಸ್ ಆಫ್, ಪೇಸ್ ಬುಕ್ ಪೋಸ್ಟ್ ಗಳ ಮೇಲೆ ನಿಗಾ: ಪೋಲೀಸ್ ನೋಡಲ್ ಅಧಿಕಾರಿಗಳು, ಸಾಮಾಜಿಕ ಮಾಧ್ಯಮ ಗಸ್ತುಗಾಗಿ ಸಂಪೂರ್ಣ ಕಣ್ಗಾವಲು

             ತಿರುವನಂತಪುರಂ: ಇಂದಿನಿಂದ ಸಾಮಾಜಿಕ ಜಾಲತಾಣಗಳ ಖಾತೆಗಳ ಮೇಲೆ ಕಟ್ಟುನಿಟ್ಟಿನ ತಪಾಸಣೆ ನಡೆಯಲಿದೆ. ಚುನಾವಣಾ ಪೂರ್ವ ಬಹಿರಂಗ ಪ್ರಚಾರ ಇಂದು ಕೊನೆಗೊಳ್ಳುತ್ತಿದ್ದು, ಚುನಾವಣೆ ಮುಗಿಯುವ ವರೆಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ನಕಲಿ ಪೋಸ್ಟ್‍ಗಳನ್ನು ಪ್ರಸಾರ ಮಾಡುವುದನ್ನು ಕಣ್ಗಾವಲಿನಡಿ ವೀಕ್ಷಿಸಲಾಗುತ್ತಿದೆ. 

             ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದೆ.

             ಸುಳ್ಳು ಹಾಗೂ ಅವಹೇಳನಕಾರಿ ಪೋಸ್ಟ್ ಹಾಕುವವರನ್ನು ಕೂಡಲೇ ಕಸ್ಟಡಿಗೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಪೋಸ್ಟ್‍ಗಳನ್ನು ತಕ್ಷಣವೇ ಅಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗಸ್ತು ನಡೆಸುವಂತೆ ನೋಡಲ್ ಅಧಿಕಾರಿಗಳಿಗೆ ಪೋಲೀಸರು ಸೂಚಿಸಿದ್ದಾರೆ.

            ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮ ಪೋಸ್ಟ್ ಮಾಡಿದ್ದಕ್ಕಾಗಿ 67 ಪ್ರಕರಣಗಳು ಈಗಾಗಲೇ ದಾಖಲಾಗಿವೆ ಎಂದು ಪೋಲೀಸರು ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries